ರಾಷ್ಟ್ರೀಯ

ಭಾರತದ ವಾಟ್ಸಾಪ್ ಬಳಕೆದಾರರಿಗೆ ಇಲ್ಲಿದೆ ಸಿಹಿ ಸುದ್ದಿ..!

Pinterest LinkedIn Tumblr

ನವದೆಹಲಿ : ವಾಟ್ಸಾಪ್ ಕೇವಲ ಚಾಟ್ ಮಾಡಲು, ಆಡಿಯೋ ವಿಡಿಯೋಗಳಿಗೆ ಮಾತ್ರವೇ ಸೀಮಿತವಲ್ಲ. ಇನ್ನುಮುಂದೆ ವಾಟ್ಸಾಪ್ ಮೂಲಕ ಬ್ಯುಸಿನೆಸ್ ಕೂಡ ಮಾಡಬಹುದಾಗಿದೆ.

ಭಾರತದಲ್ಲಿ ವಾಟ್ಸಾಪ್ ಮೂಲಕ ಸಣ್ಣ ವ್ಯವಹಾರವನ್ನು ಕೈಗೊಳ್ಳುವ ಅವಕಾಶ ನೀಡಲಾಗಿದೆ. ಆ್ಯಪ್ ಡೌನ್’ಲೋಡ್ ಮಾಡಿಕೊಂಡು ಈ ಮೂಲಕ ಗ್ರಾಹಕರೊಂದಿಗೆ ಉತ್ತಮ ಸಂಪರ್ಕವನ್ನು ಹೊಂದಬಹುದಾಗಿದೆ.

ಈ ಹೊಸ ಆ್ಯಪ್ ಗೂಗಲ್ ಪ್ಲೇ ಸ್ಟೋರ್’ನಲ್ಲಿ ಲಭ್ಯವಿದೆ. ಇದನ್ನು ಡೌನ್’ಲೋಡ್ ಮಾಡಿಕೊಳ್ಳುವುದರಿಂದ ಕಂಪನಿಗಳು ಗ್ರಾಹಕರನ್ನು ಸಂಪರ್ಕಿಸಲು ಅನುಕೂಲಕರವಾಗುತ್ತದೆ. ಉತ್ತಮವಾಗಿ ಚಾಟಿಂಗ್ ಸೌಲಭ್ಯವನ್ನೂ ಕೂಡ ಒದಗಿಸಿದೆ.

ಗ್ರಾಹಕರು ಇದಕ್ಕಾಗಿ ಸಪರೇಟ್ ಫೊನ್ ನಂಬರ್ ಹೊಂದುವುದಲ್ಲದೇ ವೈಯಕ್ತಿಕ ವಾಟ್ಸಾಪ್ ಅಕೌಂಟ್ ಹೊಂದಬೇಕು.

Comments are closed.