ಕರಾವಳಿ

ಕಾಲಕ್ಕೆ ತಕ್ಕ ಆಚಾರ ವಿಚಾರಗಳು

Pinterest LinkedIn Tumblr

ಕಾಲ ಎಷ್ಟೇ ಬದಲಾದರೂ ನಮ್ಮ ಪ್ರಾಚೀನ ಕಾಲದಿಂದ ಆಚರಿಸಿಕೊಂಡು ಬರುತ್ತಿರುವ ಆಚಾರಗಳನ್ನು ಪಾಲಿಸುವುದು ಮಾತ್ರ ಬಿಟ್ಟಿಲ್ಲ. ಬಹಳಷ್ಟು ಜನ ಏನಾದರೂ ಕೆಲಸದ ನಿಮಿತ್ತ ಹೊರಹೋಗುವಾಗ ಶಕುನಗಳನ್ನು ನೋಡುವ ಅಭ್ಯಾಸವಿರುತ್ತದೆ. ಎದುರಾದ ವ್ಯಕ್ತಿ ಅಥವಾ ಪ್ರಾಣಿಯ ಆಧಾರದಲ್ಲಿ ಒಳ್ಳೆಯ, ಕೆಟ್ಟ ಶಕುನಗಳ ಹೇಳುವುದು ನಮ್ಮ ಹಿರಿಯರಿಂದ ಕೇಳುತ್ತಿದ್ದೇವೆ. ಆದರೆ ಮನೆಯಿಂದ ಹೊರಹೋಗುವಾಗ ಕೆಲವು ಎಚ್ಚರಿಕೆಗಳನ್ನು ತೆಗೆದುಕೊಂಡರೆ ಮಾಡಲು ಹೋಗುವ ಕೆಲಸದಲ್ಲಿ ಗೆಲುವು ಸಿಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.

ಮನೆಯಿಂದ ಹೊರಗೆ ಹೋಗುವಾಗ ನಮ್ಮ ಶ್ವಾಸ ಯಾವ ಮೂಗಿನಿಂದ ಬರುತ್ತದೆ ಎಂಬುದನ್ನು ನೋಡಿಕೊಂಡು ಆ ಪಾದವನ್ನು ಮೊದಲು ಹೊರಗಿಟ್ಟು ಹೋದರೆ ಕಾರ್ಯದಲ್ಲಿ ಜಯ ಸಿಗುತ್ತದೆ.
ಮನೆಯಿಂದ ಹೊರಗೆ ಹೋಗುವಾಗ ತುಂಬಾ ಜನರಿಗೆ ದುಷ್ಟಶಕ್ತಿಗಳ ಭಯವಿರುತ್ತದೆ. ಅಂತಹವರು ದೇವರಿಗೆ ಇಟ್ಟು ಪೂಜೆ ಮಾಡಿದ ಪುಷ್ಪಗಳನ್ನು ಜೇಬಿನಲ್ಲಿ ಅಥವಾ ಬ್ಯಾಗ್’ನಲ್ಲಿ ಇಟ್ಟುಕೊಂಡು ಹೋದರೆ ದುಷ್ಟ ಶಕ್ತಿಗಳ ಭಯ ಕಾಡುವುದಿಲ್ಲ.

ದಂಪತಿಗಳ ಮಧ್ಯೆ ಕಲಹಗಳು ನಿವಾರಣೆ ಯಾಗಬೇಕೆಂದರೆ ರಾತ್ರಿ ಮಲಗುವ ಮುನ್ನ ಗಂಡನ ತಲೆಯ ಬಳಿ ಕರ್ಪೂರವನ್ನು, ಹೆಂಡತಿಯ ತಲೆಯ ಬಳಿ ಪೊಟ್ಟಣದಲ್ಲಿ ಸಿಂಧೂರವನ್ನು ಇಡಬೇಕು. ಸಿಂಧೂರವನ್ನು ಮನೆಯಲ್ಲಿ ಚೆಲ್ಲಬೇಕು. ಹೀಗೆ ಮಾಡುವುದರಿಂದ ಸಣ್ಣ ಸಣ್ಣ ಸಮಸ್ಯೆಗಳು ಪರಿಷ್ಕಾರವಾಗುತ್ತವೆ.

Comments are closed.