ಉಡುಪಿ: ಕರಾವಳಿಯಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ವಿರುದ್ದ, ಉಡುಪಿಯಲ್ಲಿಂದು, ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯ್ತು. ಉಡುಪಿಯ ಎಂಜಿ ಕಾಲೇಜು ಬಳಿ ವಿಶ್ವ ಹಿಂದೂ ಪರಿಷತ್ ,ಬಜರಂಗದಳ ಜಾಗೂ ದುರ್ಗಾ ವಾಹಿನಿ ಮಹಿಳಾ ಸಂಘಟನೆ ಜಂಟಿಯಾಗಿ ಲವ್ ಜಿಹಾದ್ ವಿರುದ್ದದ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದರು.

ಕಾಲೇಜು ವಿದ್ಯಾರ್ಥಿನಿಯರ ಬಳಿಗೆ ತೆರಳಿ ಅರಿವು ಮೂಡಿಸುವ ಪತ್ರಗಳನ್ನ ನೀಡಿ, ಮನವರಿಕೆ ಮಾಡುವ ಕೆಲಸವನ್ನು ದುರ್ಗಾವಾಹಿನಿಯ ಮಹಿಳಾ ಕಾರ್ಯಕರ್ತರು ಮಾಡಿದರು.
ಇನ್ನು ಲವ್ ಜಿಹಾದ್ ವಿರುದ್ದ ಸಹಿ ಸಂಗ್ರಹ ಅಭಿಯಾನಕ್ಕೂ ಕೂಡ ಚಾಲನೆ ನೀಡಲಾಗಿದ್ದು,ನೂರಾರು ವಿದ್ಯಾರ್ಥಿನಿಯರು ಸಹಿ ಹಾಕಿ ಲವ್ ಜಿಹಾದ್ ವಿರುದ್ದದ ಅಭಿಯಾನಕ್ಕೆ ಬಂಬಲ ಸೂಚಿಸಿದರು.
ಕರಾವಳಿಯಲ್ಲಿ ಲವ್‌ಜಿಹಾದ್ ಮಾರಕವಾಗಿ ಹಬ್ಬುತ್ತಿದೆ, ಪ್ರೀತಿಹೆಸರಲ್ಲಿ ಅಮಾಯಕ ಹಿಂದೂ ಹೆಣ್ಮಕ್ಕಳನ್ನ ಬಲೆಬೀಳಿಸಿ ,ಮತಾತಂರಗೊಳಿಸುವ ಮೂಲಕ ಭಯೋತ್ಪಕ ಚಟುವಟಿಕೆಗಳಂತಹ ಅಪರಾಧಗಳಿಗೆ ತಳ್ಳಲಾಗುತ್ತಿದೆ.ಇದನ್ನ ತಡೆಗಟ್ಟುವ ಉದ್ದೇಶದಿಂದ ಹಿಂದೂ ಹೆಣ್ಮಕ್ಕಳು ಹಾಗೂ ಕುಟುಂಬದವರಿಗೆ ಲವ್‌ಜಿಹಾದ್ ನ ಬಗ್ಗೆ ಜಾಗೃತಿ ಮೂಡಿಸುವ ಕೆಲಸಕ್ಕೆ ಹಿಂದೂ ಸಂಘಟನೆಗಳು ಮುಂದಾಗಿದ್ದಾರೆ.
Comments are closed.