ಮನೋರಂಜನೆ

ಬಿಗ್‌ಬಾಸ್‌ ಕೊನೆಯ ಹಂತಕ್ಕೆ ಬಂದು ಔಟ್ ಆದ ಅನುಪಮಾ ! ಕಣ್ಣೀರು ಹಾಕುತ್ತ ಹೊರನಡೆದ “ಅಕ್ಕ”

Pinterest LinkedIn Tumblr

ಬೆಂಗಳೂರು: ಬಿಗ್‌ಬಾಸ್‌ ಸೀಸನ್‌ 5 ಕೊನೆಯ ಹಂತಕ್ಕೆ ಬಂದು ತಲುಪಿದ್ದು, ಗೆಲುವಿನ ಲೆಕ್ಕಾಚಾರದ ಮಧ್ಯೆ ಶನಿವಾರ ಅನುಪಮಾ ಗೌಡ ಮನೆಯಿಂದ ಔಟ್ ಆಗಿದ್ದಾರೆ.

ಶನಿವಾರ ಬಿಗ್‌ಬಾಸ್‌ ಮನೆಯಿಂದ ಅನುಪಮಾ ಹಾಗು ನಿವೇದಿತಾ ಗೌಡ ಹೊರಬಿದ್ದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಭಾರಿ ಸುದ್ದಿ ಹಬ್ಬಿತ್ತು. ಆದರೆ ಅನುಪಮಾ ಗೌಡ ಮಾತ್ರ ಮನೆಯಿಂದ ಔಟ್ ಆಗಿದ್ದಾರೆ.

ಶನಿವಾರ ನಡೆದ ವಾರದ ಕಥೆ ಕಿಚ್ಚನ ಜತೆ ಎಪಿಸೋಡು ತೀವ್ರ ಕುತೂಹಲದಿಂದ ಕೂಡಿತ್ತು. ಕಾರಣ ಇದು ಮನೆಯಲ್ಲಿ ನಡೆಯುತ್ತಿರುವ ಕೊನೆ ಎಪಿಸೋಡ್‌ ಆಗಿತ್ತು. ಯಾಕಂದ್ರೆ ಮುಂದಿನ ವಾರವೇ ಬಿಗ್‌ಬಾಸ್ ಫೈನಲ್‌. ಸದ್ಯ ಮನೆಯಲ್ಲಿ ಉಳಿದುಕೊಂಡಿರುವ 7 ಜನ ಸ್ಪರ್ಧಿಗಳು ಗೆಲುವಿನ ಕನಸು ಕಾಣುತ್ತಿದ್ದರು. ಆದರೆ, ಈ ಏಳೂ ಜನರ ಪೈಕಿ ಓರ್ವ ಸ್ಪರ್ಧಿ ಮನೆಯಿಂದ ಹೋಗಬೇಕಾಯಿತು.

ಬಿಗ್‌ಬಾಸ್ ಮನೆಗೆ ಆಗಮಿಸಿದ್ದ ಸುದೀಪ್‌ ಎಲಿಮಿನೇಟ್ ಪ್ರಕ್ರಿಯೆ ಪ್ರಾರಂಭಿಸಿ, ಮೊದಲು ದಿವಾಕರ್, ಚಂದನ್‌, ಸಮೀರ್‌, ನಿವೇದಿತಾ, ಜೆಕೆ, ಶೃತಿ ಅವರನ್ನು ಸೇಫ್‌ ಮಾಡಿ. ಕೊನೆಯದಾಗಿ ಉಳಿದುಕೊಂಡ ಅನುಪಮಾ ಮನೆಯಿಂದ ಎಲಿಮಿನೇಟ್ ಆದರು. ಬಿಗ್‌ಬಾಸ್‌ ಮನೆಯಿಂದ ಹೊರಹೋಗುತ್ತಿದ್ದಂತೆ ಅನುಪಮಾ ಕಣ್ಣೀರು ಹಾಕಿದರು.

Comments are closed.