ಮನೋರಂಜನೆ

ಇಂದು ಬಿಗ್’ಬಾಸ್ ಮನೆಯಲ್ಲಿ ನಡೆಯಲಿದೆಯೇ ಡಬಲ್ ಎಲಿಮಿನೇಷನ್ ! ಯಾರು ಹೋಗುತ್ತಾರೆ..?

Pinterest LinkedIn Tumblr

ಬೆಂಗಳೂರು: ಬಿಗ್ ಬಾಸ್ ‘ನಲ್ಲಿ ಕೊನೆಯ ಹಂತದ ಸರ್ಕಸ್ ನಡೆಯುತ್ತಿದ್ದು, ಇಂದು ಯಾರು ಮನೆಯಿಂದ ಹೊರಬೀಳುತ್ತಾರೆ ಎಂಬ ಪ್ರಶೆ ಎದ್ದಿದೆ.

ಹದಿನಾಲ್ಕನೇ ವಾರ ಎಲ್ಲ ಸ್ಪರ್ಧಿಗಳು ಡೇಂಜರ್ ಝೋನ್ ನಲ್ಲಿದ್ದಾರೆ. ‘ಬಿಗ್ ಬಾಸ್’ ಶೋ ಇನ್ನೇನು ಮುಗಿಯುವ ಹಂತಕ್ಕೆ ಬಂದ ಕಾರಣ, ಜನರ ಪ್ರೀತಿ ಹಾಗೂ ವಿಶ್ವಾಸ ಯಾವ ಸ್ಪರ್ಧಿಗೆ ಹೆಚ್ಚು ಇದೆ ಎಂದು ತಿಳಿಯಲು ಎಲ್ಲರನ್ನೂ ನೇರವಾಗಿ ನಾಮಿನೇಟ್ ಮಾಡಲಾಗಿದೆ. ಹೀಗಾಗಿ ಇಂದು ಯಾವ ಸ್ಪರ್ಧಿ ಔಟ್ ಆಗುತ್ತಾರೋ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಮೂಡಿದೆ.

‘ಬಿಗ್ ಬಾಸ್ ಕನ್ನಡ-5’ ಕಾರ್ಯಕ್ರಮದ ಗ್ರ್ಯಾಂಡ್ ಫಿನಾಲೆಗೆ ಇನ್ನೊಂದೇ ವಾರ ಬಾಕಿ ಇದೆ. ಇನ್ನೂ ‘ಬಿಗ್ ಬಾಸ್’ ಮನೆಯೊಳಗೆ ಇರುವ ಸ್ಪರ್ಧಿಗಳ ಸಂಖ್ಯೆ 7. ಆದ್ದರಿಂದ, ಇವತ್ತು ಯಾರಾದರು ಒಬ್ಬರು ಔಟ್ ಆಗುತ್ತಾರೋ ಅಥವಾ ಡಬಲ್ ಎಲಿಮಿನೇಷನ್ ನಡೆಯುತ್ತಾ ಎಂಬ ಕೌತುಕ ಕೂಡ ಎಲ್ಲರಲ್ಲೂ ಕಾಡುತ್ತಿದೆ.

ಸಮೀರಾಚಾರ್ಯ, ನಿವೇದಿತಾ, ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಶ್ರುತಿ ಪ್ರಕಾಶ್, ಅನುಪಮಾ ಹಾಗೂ ದಿವಾಕರ್ ಪೈಕಿ ಮುಂದಿನ ಹಂತಕ್ಕೆ ಹೋಗುವವರು ಯಾರ್ಯಾರು ಎಂಬುದು ಸದ್ಯದ ವಿಲಿಯನ್ ಡಾಲರ್ ಪ್ರಶ್ನೆ. ಮತ್ತೆ ವೀಕ್ಷಕರ ಅಭಿಪ್ರಾಯಕ್ಕೆ ಮೊರೆ ಹೋದ ‘ಬಿಗ್ ಬಾಸ್’: ಸ್ಪರ್ಧಿಗಳಿಗೆ ಶಾಕ್.! ನಿನ್ನೆ (ಶುಕ್ರವಾರ) ಮಧ್ಯರಾತ್ರಿ ಹೊತ್ತಿಗೆ ವೋಟಿಂಗ್ ಲೈನ್ ಬಂದ್ ಆಗಿದೆ. ವೀಕ್ಷಕರ ಎಸ್.ಎಂ.ಎಸ್ ಆಧಾರ ಮೇಲೆ ಇಂದು ಯಾರಿಗೆ ಗೇಟ್ ಪಾಸ್ ಸಿಗುತ್ತದೆಯೋ ಕಾದು ನೋಡಬೇಕು.

Comments are closed.