ಕುಂದಾಪುರ: ಈ ಇಬ್ಬರು ಜೋಡಿ ಹಕ್ಕಿಗಳು ಮೂಲತಃ ಶಿವಮೊಗ್ಗದವರು. ಕೂಲಿ ಕೆಲಸ ಮಾಡಿಕೊಂಡಿದ್ದ ಇಬ್ಬರಿಗೂ ಕೆಲಸದ ವೇಳೆ ಪ್ರೇಮಾಂಕುರವಾಗಿತ್ತು. ಸುಮಾರು ಒಂದೂವರೆ ವರ್ಷದ ಇಬ್ಬರ ಪ್ರೇಮ ಯಾವಾಗ ಮನೆಯಲ್ಲಿ ಗೊತ್ತಾಯ್ತೋ ಇಬ್ಬರ ಲವ್ವಿಡವ್ವಿಗೆ ಬ್ರೇಕ್ ಹಾಕೋಕೆ ಮುಂದಾದ್ರು. ಆದರೇ ಪರಸ್ಪರ ಗಾಢವಾಗಿ ಪ್ರೀತಿಸುತ್ತಿದ್ದ ಈ ಯುವ ಜೋಡಿ ಮಾತ್ರ ಮದುವೆಯಾಗಲೇಬೇಕೆಂಬ ಹಠಕ್ಕೂ ಬಿದ್ರು. ಅವರ ಪ್ರೀತಿಗೆ ಸಾಥ್ ನೀಡಿ ಮದುವೆಗೆ ಸಪೋರ್ಟ್ ಮಾಡಿದ್ದು ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪ ನಿವಾಸಿ, ನಾಗಸಂಪಿಗೆ ಜನಾಂಗದ ಶ್ಯಾಮ ಪ್ರಸಾದ್ ಹಾಗೂ ಬೆಳಂತನಕೊಪ್ಪ ನಿವಾಸಿ, ದಲಿತ ಯುವತಿ ರೇಖಾ ಮದುವೆಯಾದ ಜೋಡಿಗಳು.

ಅಂತಾರ್ಜಾತಿ ಎನ್ನುವ ಕಾರಣಕ್ಕಾಗಿ ಇಬ್ಬರ ಪ್ರೀತಿಗೆ ಮನೆಯವರು ತುಂಬಾನೇ ವಿರೋಧ ಮಾಡಿದ್ರು. ಮದುವೆಗೆ ಪೋಷಕರ ವಿರೋಧ ಹಿನ್ನೆಲೆಯಲ್ಲಿ ಪ್ರೇಮಿಗಳಿಗೆ ಕುಂದಾಪುರಕ್ಕೆ ಬಂದಿದ್ದು ಮಾತ್ರವಲ್ಲದೇ ಇಲ್ಲೇ ಕೂಲಿಯಾಳುಗಳಾಗಿ ಕೆಲಸ ಮಾಡಿದ್ರು. ನನಗೆ ನೀನು…ನೀನು ನನಗೆ ನಾನು ಎಂಬಂತೆ ಕಷ್ಟ ಜೀವನ ಸಾಗಿಸಿದ ಇಬ್ಬರು ಮದುವೆಯಾಗಲು ಕುಂದಾಪುರದ ಸಾಂತ್ವಾನ ಕೇಂದ್ರಕ್ಕೆ ಬಂದು ಅಲ್ಲಿನ ಅಧ್ಯಕ್ಷೆ ರಾಧಾದಾಸ್ ಅವರ ಬಳಿ ಮನವಿ ಇಡುತ್ತಾರೆ. ಇದಕ್ಕೆ ಸ್ಪಂದಿಸಿದ ಕೇಂದ್ರವು ಇಬ್ಬರಿಗೂ ಮದುವೆ ಮಾಡಲು ನಿಶ್ಚಯಿಸಿದ್ದು ಶುಭ ಶುಕ್ರವಾರ ಗಣ್ಯರ ಸುಮ್ಮುಖದಲ್ಲಿ ಈ ಪ್ರೇಮಿಗಳ ವಿವಾಹ ಸರಳವಾಗಿ ಮಾಡಲಾಯಿತು.
ಸದ್ಯ ಕುಂದಾಪುರದಲ್ಲಿಯೇ ಕೂಲಿ ಕಾರ್ಯ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಜೋಡಿ ಮುಂದೆಯೂ ಕೂಲಿ ಮಾಡಿಯಾದರೂ ಪರಸ್ಪರ ಅನ್ಯೋನ್ಯವಾಗಿ ಬಾಳುತ್ತೇವೆಂಬ ಗಟ್ಟಿ ನಿರ್ಧಾರ ಮಾಡಿದ್ದಾರೆ.

ರಾಧಾದಾಸ್ ಮಾಡಿಸಿದ 123ನೇ ಮದುವೆ!
ಮಹಿಳಾ ಸಾಂತ್ವಾನ ಕೇಂದ್ರದ ವತಿಯಿಂದ ಮದುಮಗಳಿಗೆ ಧಾರೆ ಸೀರೆ ಕಾಲುಂಗುರ, ಹಾಗೂ ಕರಿಮಣಿ, ಮದುಮಗನಿಗೆ ವಸ್ತ್ರ ನೀಡಿದ್ದು, ಮಹಿಳಾ ಸಾಂತ್ವಾನ ಕೇಂದ್ರ ಅಧ್ಯಕ್ಷ ರಾಧಾದಾಸ್ ನೇತೃತ್ವದಲ್ಲಿ ನಡೆದ 123ನೇ ಮದುವೆ ಇದಾಗಿದೆ.
ಚಿತ್ರ,ವರದಿ- ಯೋಗೀಶ್ ಕುಂಭಾಸಿ
Comments are closed.