
ಬೆಂಗಳೂರು: ನಾನು ಎಲ್ಲಿಗೇ ಹೋದರೂ ಈ ಸ್ವಚ್ಛತೆ ಮತ್ತು ಶುದ್ಧೀಕರಣ ಸೇವೆಯನ್ನು ನೀವು ಹೀಗೆಯೇ ಮುಂದುವರಿಸುತ್ತೀರಾ? ಎಂದು ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಅವರು ಮಂಗಳವಾರ ಬಿಜೆಪಿ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ.
ಕಳೆದ ಶನಿವಾರ ಶಿರಸಿಯ ರಾಘವೇಂದ್ರ ಮಠದಲ್ಲಿ ಪ್ರಕಾಶ್ ರೈ ಅವರು ಭಾಗವಹಿಸಿದ್ದ ಕಾರ್ಯಕ್ರಮದ ವೇದಿಕೆ ಹಾಗೂ ಮಠದ ಆವರಣವನ್ನು ಬಿಜೆಪಿ ಕಾರ್ಯಕರ್ತರು ನಿನ್ನೆ ಗೋಮೂತ್ರ ಸಿಂಪಡಿಸಿ ಶುದ್ಧಗೊಳಿಸಿದ್ದರು. ಈ ಕುರಿತು ಇಂದು ಟ್ವೀಟ್ ಮಾಡಿರುವ ಪ್ರಕಾಶ್ ರೈ, ನಾನು ಶಿರಸಿ ಪಟ್ಟಣದಲ್ಲಿ ಮಾತನಾಡಿದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ಸ್ವಚ್ಛಗೊಳಿಸಿ, ಶುದ್ಧೀಕರಿಸುತ್ತಿದ್ದಾರೆ… ಹಸುವಿನ ಮೂತ್ರವನ್ನು(ದೈವಿಕ ಗೋಮೂತ್ರ) ಚಿಮುಕಿಸುವ ಮೂಲಕ……, ನಾನು ಎಲ್ಲಿಗೇ ಹೋಗುತ್ತಿದ್ದರೂ ಈ ಶುದ್ಧೀಕರಣ ಮತ್ತು ಸ್ವಚ್ಛತೆ ಸೇವೆಯನ್ನು ನೀವು ಮುಂದುವರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.
BJP workers cleaning and purifying the stage ..from where I spoke in Sirsi town …by sprinkling cow urine (divine gomoothra)…???…will you continue this cleaning and purification service where ever I go….. #justasking pic.twitter.com/zG1hKF8P4r
— Prakash Raj (@prakashraaj) January 16, 2018
Comments are closed.