ಕರ್ನಾಟಕ

ಇಡಿ ಸುಳಿಗೆ ಸಿಲುಕಿರುವ ರೋಷನ್‌ ಬೇಗ್‌ ರಾಜೀನಾಮೆ ನೀಡಲಿ: ಪ್ರಹ್ಲಾದ್‌ ಜೋಷಿ

Pinterest LinkedIn Tumblr


ಹುಬ್ಬಳ್ಳಿ: ಸಚಿವ ರೋಷನ್‌ ಬೇಗ್‌ಗೆ ಜಾರಿ ನಿರ್ದೇಶನಾಲಯ ನೋಟಿಸ್‌ ಜಾರಿ ಮಾಡಿದ್ದು ಗಂಭೀರ ವಿಷಯ. ಈ ಹಿನ್ನೆಲೆಯಲ್ಲಿ ಬೇಗ್‌ ರಾಜೀನಾಮೆ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಸಂಸದ ಪ್ರಹ್ಲಾದ್‌ ಜೋಷಿ ಆಗ್ರಹಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, ಬೇಗ್‌ ರಾಜೀನಾಮೆ ನೀಡುವವರೆಗೂ ಹೋರಾಟ ಮಾಡಲಾಗುವುದು ಎಂದರು.

ಜಾರಿ ನಿರ್ದೇಶನಾಲಯ ನೋಟಿಸ್‌ ಜಾರಿ ಮಾಹಡಿದ ಹಿನ್ನಲೆಯಲ್ಲಿ ರೋಷನ್‌ ಬೇಗ್‌ ಹುಬ್ಬಳ್ಳಿ ಕಾರ್ಯಕ್ರಮ ಕೂಡ ರದ್ದು ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ರಾಜೀನಾಮೆ ಪಡೆಯಲಿ ಎಂದರು.

ಸಿಎಂ ನೀಡಿರುವ ಹಿಂದೂ ಉಗ್ರವಾದಿ ಹೇಳಿಕೆ ನೀಡಿರುವುದು ಆಕ್ಷೇಪಾರ್ಹ. ಪಾಕಿಸ್ತಾನದ ಪರವಾದ ಹೇಳಿಕೆ ನೀಡುತ್ತಿದ್ದೀರಿ.

ಹೀಗಾಗಿ ನೀವು ಕೂಡಲೆ ಆ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು ಎಂದು ಪ್ರಹ್ಲಾದ್‌ ಜೋಷಿ ತಿಳಿಸಿದರು.

Comments are closed.