
ಬೆಂಗಳೂರು: ಬಿಗ್‌ಬಾಸ್ ಮನೆಯಿಂದ ರಿಯಾಜ್ ಹೊರಗೆ ಹೋಗಿದ್ದರೂ ಅವರ ವಿರುದ್ಧ ಮಾತನಾಡುವುದು ಇನ್ನೂ ನಿಂತಿಲ್ಲ. ರೂಲ್ಸ್…ರೂಲ್ಸ್ ಎನ್ನುತ್ತಿದ್ದ ರಿಯಾಜ್ ವಿರುದ್ಧ ಬಿಗ್‌ಬಾಸ್ ಮನೆ ಮಂದಿ ತಮ್ಮ ಕೋಪ, ಅಸಹನೆಯನ್ನು ಇನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.
ಬಿಗ್‌ಬಾಸ್ ಮನೆಗೆ ಶ್ರುತಿಯವರ ತಂದೆ ಪ್ರಕಾಶ್ ಅವರು ಎಂಟ್ರಿ ನೀಡಿದ್ದರು. ಶ್ರುತಿಯೊಂದಿಗೆ ಕೆಲಹೊತ್ತು ಕಳೆದ ಪ್ರಕಾಶ್ ಅವರು, ಎಲ್ಲ ಸ್ಪರ್ಧಿಗಳೊಂದಿಗೆ ಮಾತನಾಡಿ ಮನೆಯಿಂದ ಹೊರನಡೆದರು.
ಇದಾದ ಮೇಲೆ ಈ ವಾರ ಮನೆಯಲ್ಲಿ ಕ್ಯಾಪ್ಟನ್ಸಿ ಇಲ್ಲದೆ ಎಲ್ಲರನ್ನು ನಾಮಿನೇಟ್ ಮಾಡಲಾಯಿತು.
ಬಳಿಕ ಅನುಪಮಾ ಜೊತೆ ಮಾತನಾಡುತ್ತಿದ್ದ ಚಂದನ್ ಅವರು ರಿಯಾಜ್ ವಿರುದ್ಧ ತಮ್ಮ ಸಿಟ್ಟನ್ನು ವ್ಯಕ್ತಪಡಿಸಿದರು. ‘ ರಿಯಾಜ್ ಮನೆಯಿಂದ ಔಟ್ ಆದ ಮೇಲೆ ನನ್ನ ಮನ್ಸು ಹಗುರವಾಗಿದೆ. ಅವರು ಇರುವಾಗ ಎಲ್ಲದಕ್ಕೂ ನಾನೇ ವಿನ್ ಆಗಬೇಕು…ಬಿಗ್ ಬಾಸ್ ವಿನ್ನರ್ ತಾನೇ ಎಂದು ಹೇಳಿಕೊಂಡು ತಿರುಗುತ್ತಿದ್ದರು. ಹೊರಗೆ ಹೋದದ್ದು ಒಳ್ಳೆಯದಾಯಿತು’ ಎಂದು ಅನುಪಮಾ ಬಳಿ ದೋರುತ್ತಿದ್ದರು. ಇದಕ್ಕೆ ಅನುಪಮಾ ಕೂಡ ಧ್ವನಿ ಸೇರಿಸಿ, ರಿಯಾಜ್ ವಿರುದ್ಧ ತಮಗಿರುವ ಕೋಪವನ್ನು ಬಹಿರಂಗಪಡಿಸಿದರು.
ಅದಾದ ಮೇಲೆ ಚಂದನ್ ಮತ್ತೆ ನಿವೇದಿತಾ ಗೌಡ ಹಾಗು ದಿವಾಕರ್ ಜೊತೆ ರಿಯಾಜ್ ವಿರುದ್ಧ ತಮಗಿರುವ ಅಸಮಾಧಾನ ವ್ಯಕ್ತಪಡಿದರೆ, ನಿವೇದಿತಾ ಹಾಗು ದಿವಾಕರ್ ಕೂಡ ರಿಯಾಜ್ ವಿರುದ್ಧ ಮಾತನಾಡುತ್ತಿದ್ದರು. ರಿಯಾಜ್ ಅವರು ಬಿಗ್ ಮನೆಯಿಂದ ಹೊರಹೋಗಿದ್ದರೂ ಅವರ ವಿರುದ್ಧದ ಕೋಪ ಮಾತ್ರ ತಣ್ಣಗಾಗಿಲ್ಲ.
Comments are closed.