
ಮಂಗಳೂರು : ಸಂತ ಆಗ್ನೇಸ್ ಕಾಲೇಜಿನ ಶತಮಾನೋತ್ಸವ ಸಂಭ್ರಮಾಚರಣೆಯ ಉದ್ಘಾಟನೆ ಇತ್ತಿಚೇಗೆ ಕಾಲೇಜಿನ ಮುಖ್ಯದ್ವಾರ ದ ಬಳಿ ನಡೆಯಿತು. ಕಾರ್ಯಕ್ರಮವನ್ನು ಶಾಸಕ ಜೆ ಆರ್ ಲೋಬೋ ಅವರು ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಸಮಿತಿಯ ಸಂಚಾಲಕ ಡಾ| ಮೀರಾ ಆರಾನ್ಹಾ ಅವರು ವಹಿಸಿದ್ದರು. ಅತಿಥಿಯಾಗಿ ಆಪೋಸ್ಟಿಲಿಕ್ ಕಾರ್ಮೆಲ್ ಸಂಸ್ಥೆಯ ಪ್ರೊವಿನ್ಶಿಯಲ್ ಸುಪೀರಿಯರ್ , ಸಿ.ಎಂ.ಕಾರ್ಮೆಲ್ ರೀಟಾ ಎ.ಸಿ ಭಾಗವಹಿಸಿದ್ದರು.
ಆಪೋಸ್ಟಿಲಿಕ್ ಕಾರ್ಮೆಲ್ ಸಂಸ್ಥೆಯ ಶೈಕ್ಷಣಿಕ ಕಾರ್ಯದರ್ಶಿ,ಸಿ.ಎಂ ಐಡ, ಸಂತ ಅಗ್ನೇಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಮರಿಯ ರೂಪಾ, ಕಾಲೇಜಿನ ಪ್ರಾಂಶುಪಾಲ ಸಿ.ಎಂ, ಶಮಿತಾ, ವಿಶ್ರಾಂತ ಪ್ರಾಂಶುಪಾಲ ಸಿ.ಎಂ ಅಲೋಶಿಯಸ್ ಡಾ| ಎಂ.ಒಲಿವಿಯ ಎ.ಸಿ ಹಾಗೂ ಸಿ.ಎಂ ಸುಪ್ರೀಯಾ, ಮೈಕಲ್ ಡಿ’ಸೋಜಾ ನೀನಾ ಎಸ್ ಹಾಗೂ ಸದಸ್ಯ ಅನಿತಾ ಉಪಸ್ಥಿತರಿದ್ದರು.
https://www.youtube.com/watch?v=54uGAo46wWY
https://www.youtube.com/watch?v=9TDpXyFVY1c

ಕಾಲೇಜಿನ ಉಪನ್ಯಾಸಕಿ ಡಾ| ಜೆರಲಿನ್ ಪಿಂಟೋ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ ಶತಮಾನೋತ್ಸವ ಸಮಾರಂಭವು 2020-21 ರಲ್ಲಿ ಮುಕ್ತಾಯಗೊಳ್ಳಲಿದ್ದು, ಮಹಿಳಾ ಶಿಕ್ಷಣದ ಈ ಯಶಸ್ವಿ ನೂರು ವರ್ಷಗಳ ಸೇವೆಯು ತಮ್ಮೆಲ್ಲರ ಪ್ರಯತ್ನದ ಫಲವಾಗಿದೆ ಎಂದರು.
ಕಾಲೇಜಿನ ಮುಖ್ಯ ಗ್ರಂಥಪಾಲಕಿ ಡಾ|ವಿಶಾಲಾ ಬಿ.ಕೆ ಅವರಿಂದ ರಚಿಸಲ್ಪಟ್ಟಿರುವ ಶತಮಾನೋತ್ಸವದ ಅಂತರ್ಜಾಲವನ್ನು ಸಿ.ಎಂ ಕಾರ್ಮೆಲ್ ರೀಟಾ ಅವರು ಬಿಡುಗಡೆಗೊಳಿಸಿದರು. ದೇಶ ವಿದೇಶಗಳಲ್ಲಿರುವ ಹಳೆ ವಿಧ್ಯಾರ್ಥಿಗಳು ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ವಿಶೇಷ ಆಕರ್ಷಣೆ : ರಸ್ತೆ ಮಧ್ಯೆ ವಿದ್ಯಾರ್ಥಿಗಳಿಂದ ಸಮೂಹ ನೃತ್ಯ
ಕಾಲೇಜಿನ ಶತಮಾನೋತ್ಸವ ಸಂಭ್ರಮಾಚರಣೆಯ ಪ್ರಯುಕ್ತ ಸಂಜೆ ವಿಶೇಷ ಆಕರ್ಷಣೆಯಾಗಿ ಕಾಲೇಜಿನ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಂದ ಕಾಲೇಜಿನ ಮುಂಭಾಗದ ರಸ್ತೆಯಲ್ಲಿ ಹಾಗೂ ನಗರದ ಸಿಟಿ ಸೆಂಟರ್ ಮಾಲ್ ಮತ್ತು ಫೋರಂ ಫಿಜಾ ಮಾಲ್ ಮುಂಭಾಗದ ರಸ್ತೆಯಲ್ಲಿ ಜನಸಮೂಹದ ಮಧ್ಯೆ ಸಮೂಹ ನೃತ್ಯ (Special attraction of the evening was the flash mob comprising the students, staff and Agnesian alumni) ನಡೆಯಿತು.
ಟ್ರಾಫಿಕ್ ಜಾಮ್ : ಸಾರ್ವಜನಿಕರ ಆರೋಪ
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ರಸ್ತೆ ಮಧ್ಯೆ ನೃತ್ಯ ಹಮ್ಮಿಕೊಂಡ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಸಾಗುವ ವಾಹನಗಳ ಸುಗಮ ಸಂಚಾರಕ್ಕೆ ಆಡಚಣೆಯುಂಟಾಗಿ ಕೆಲವು ಹೊತ್ತುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಈ ವೇಳೆ ಈ ಬಗ್ಗೆ ಪೊಲೀಸರು ಕೂಡ ಯಾವೂದೇ ಕ್ರಮಕೈಗೊಳ್ಳಲ್ಲಿ ಎಂಬ ಆರೋಪವೂ ಕೇಳಿ ಬಂದಿದೆ.
Comments are closed.