
ಮಂಗಳೂರು / ಬಂಟ್ವಾಳ: ವಾಟ್ಸಪ್‌ನಲ್ಲಿ ಧರ್ಮನಿಂದನೆ, ಮಹಿಳೆಯ ಅವಹೇಳನ ಹಾಗೂ ಕೋಮುದ್ವೇಷ ಕೆರಳಿಸುವಂತಹ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಟ್ವಾಳ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ವಾಟ್ಸಪ್‌ನಲ್ಲಿ ಧಾರ್ಮಿಕ ಭಾವನೆಗೆ ನಿಂದನೆ ಮಾಡಿ ಕೋಮುದ್ವೇಷಕ್ಕೆ ಕಾರಣವಗುವಂತಹ ಪೋಸ್ಟ್ ಹಾಕಿದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರು ವಾಟ್ಸಪ್‌ನ ಗ್ರೂಪ್ ಅಡ್ಮಿನ್‌ಗಳಾದ ಉಪ್ಪಿನಂಗಡಿಯ ಬಾಲಕೃಷ್ಣ ಪೂಜಾರಿ (48) ಹಾಗೂ ಬಂಟ್ವಾಳದ ಇರಾ ಗ್ರಾಮದ ಸತೀಶ್ ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಬಾಲಕೃಷ್ಣ ಪೂಜಾರಿ ಕೆಎಸ್‌ಆರ್‌ಟಿಸಿ ಡ್ರೈವರ್ ಎನ್ನಲಾಗಿದೆ. ಇವರಿಬ್ಬರು ಪಣೋಲಿಬೈಲ್ ಮತ್ತು ಮೌರಿ ಎನ್ನುವ ವಾಟ್ಸಪ್ ಗ್ರೂಪ್ ಅಡ್ಮಿನ್ ಆಗಿದ್ದು, ಈ ಗ್ರೂಪ್‌ನಲ್ಲಿ ಕೋಮುದ್ವೇಷ ಮೂಡಿಸುವಂತಹ ಸಂದೇಶಗಳನ್ನು ಹಾಕಿದ್ದರು ಎಂದು ದ.ಕ. ಎಸ್‌ಪಿ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಧಾರ್ಮಿಕ ಭಾವನೆಗಳನ್ನು ಹಾನಿಯುಂಟು ಮಾಡುವುದು ಮತ್ತು ಮಹಿಳೆಯೊಬ್ಬಳ ಚಾರಿತ್ರ್ಯ ಹರಣ ಮಾಡುವ ಸಂದೇಶಗಳನ್ನು 2 ವಾಟ್ಸಾಪ್ ಗ್ರೂಪ್‌ಗ್ಳಲ್ಲಿ ಬಂಧಿತರು ಪೋಸ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಹದ್ದಿನ ಕಣ್ಣು ಇಟ್ಟಿರುವ ಪೊಲೀಸರು ಕಾರ್ಯಾಚರಣೆ ನಡೆಸಿ ವಾಟ್ಸಾಪ್ ಗ್ರೂಪ್ ಎಡ್ಮಿನ್ ಆಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿ ಐಪಿಸಿ ಸೆಕ್ಷನ್ 153(ಎ) , 354 ಮತ್ತು 504 ರ ಅಡಿ ಪ್ರಕರಣ ದಾಖಲಿಸಿದ್ದಾರೆ.
Comments are closed.