
ಬೆಂಗಳೂರು: ಬಿಗ್‌ಬಾಸ್ ಮನೆಗೆ ಗುರುವಾರ ಭೇಟಿ ನೀಡಿದ ದಿವಾಕರ್ ಹೆಂಡತಿ ‘ನೀವು ಗೆಲ್ಲಲೇ ಬೇಕು’ ಎಂದು ಹಠ ಹಿಡಿದು ಕೂತು ಬಿಟ್ಟರು.
ಬಿಗ್‌ಬಾಸ್ ಮನೆಯೊಳಗೆ ಎಂಟ್ರಿ ನೀಡಿದ ದಿವಾಕರ್ ಪತ್ನಿಯನ್ನು ದಿವಾಕರ್ ಮನೆಯೊಳೆಗೆಲ್ಲ ಸುತ್ತಾಡಿಸಿದ. ಈ ವೇಳೆ ತನ್ನ ಬೆಡ್ ಮೇಲೆ ಕೂರಿಸಿ ಪತ್ನಿ ಜೊತೆ ಕಷ್ಟ ಸುಖದ ಮಾತುಕತೆಗೆ ಇಳಿದ ದಿವಾಕರ್ ಜೊತೆ ಪತ್ನಿ ಮಾತ್ರ ತನ್ನ ಹಠವನ್ನೇ ಮುಂದುವರಿಸಿದರು
ನೀವು ಮನೆಗೆ ಬರುವಾಗ ಬಿಗ್ ಬಾಸ್ ಗೆದ್ದೇ ಬರಬೇಕು. ಬರ್ತೀರಲ್ಲ…ಬರಲೇ ಬೇಕು. ನಮ್ಮ ಮನೆಯವರು, ಕುಟುಂಬದವರೆಲ್ಲ ನಿಮ್ಮನ್ನು ನೋಡ್ತಾರೆ. ನೀವು ಗೆಲ್ತಿರಲ್ವ…ಗೆಲ್ಲಲೇಬೇಕು ಎಂದು ದಿವಾಕರ್ ಪತ್ನಿ ಹಠಕ್ಕೆ ಬಿದ್ದರು. ಈ ವೇಳೆ ದಿವಾಕರ್ ಕೆಲವು ಹೊತ್ತು ಸಮಾಧಾನ ಮಾಡಿದರು.
Comments are closed.