ಕರಾವಳಿ

ತುಂಬೆ ಡ್ಯಾಂ 6 ಮೀ ಎತ್ತರ ನೀರು ಸಂಗ್ರಹ : ಮುಂದಿನ ಬೇಸಿಗೆ ಕಾಲಕ್ಕೆ ನೀರಿನ ಅಭಾವ ಬರದಂತೆ ಮುನ್ನೆಚ್ಚರಿಕೆ

Pinterest LinkedIn Tumblr

ಮಂಗಳೂರು, ಜನವರಿ. 11 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಗೆ ಕುಡಿಯುವ ನೀರಿನ ಪೂರೈಕೆಗಾಗಿ ಮುಂದಿನ ಬೇಸಿಗೆ ಕಾಲಕ್ಕೆ ನೀರಿನ ಅಭಾವ ಬಾರದಂತೆ ಮುಂಜಾಗ್ರತಾ ಕ್ರಮವಾಗಿ ಹಾಲಿ ಇರುವ ಕಿಂಡಿ ಅಣೆಕಟ್ಟಿನಲ್ಲಿ ನೀರಿನ ಮಟ್ಟವನ್ನು 6 ಮೀ. ಎತ್ತರಕ್ಕೆ ನಿಲ್ಲಿಸಿ, ಸಂಗ್ರಹಣೆ ಮಾಡಲು ಜಿಲ್ಲಾಧಿಕಾರಿಯವರು ಸೂಚಿಸಿದ್ದಾರೆ. ಈ ಪ್ರಯುಕ್ತ ಜನವರಿ 11ರ ಮಧ್ಯ ರಾತ್ರಿಯಿಂದಲೇ ನೀರು ಸಂಗ್ರಹಿಸಲಾಗುವುದು.

ಈ ಹಿನ್ನೆಲೆಯಲ್ಲಿ ಕಿಂಡಿ ಅಣೆಕಟ್ಟಿನ ಮುಳುಗಡೆ ಪ್ರದೇಶದಲ್ಲಿರುವ ಖಾಸಗಿ ಆಸ್ತಿಪಾಸ್ತಿ/ಸ್ವತ್ತುಗಳಿಗೆ ಹಾನಿ ಉಂಟಾಗುವ ಬಗ್ಗೆ ಎಚ್ಚರಿಕೆ ವಹಿಸುವಂತೆ ಹಾಗೂ ಎಲ್ಲಾ ಸಾರ್ವಜನಿಕರು ನದಿದಡದಲ್ಲಿ ಸಂಚರಿಸುವಾಗ ಮುನ್ನೆಚ್ಚರಿಕೆ ವಹಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಪ್ರಕಟಣೆ ತಿಳಿಸಿದೆ.

17ರಂದು ನೀರಿಲ್ಲ :

ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ 18ಒಉಆ ರೇಚಕ ಸ್ಥಾವರದ ಜಾಕ್‍ವೆಲ್‍ನಲ್ಲಿ ಮರಳು, ಕಸಕಡ್ಡಿಗಳು, ಮಡ್ಡಿ ಇತ್ಯಾದಿಗಳು ಶೇಖರಣೆಗೊಂಡಿದ್ದು, ನೀರೆತ್ತುವ ಪಂಪ್ ಚಾಲನೆಯಲ್ಲಿ ಅಡೆತಡೆ ಉಂಟಾಗುತ್ತಿರುವುದನ್ನು ಸರಿಪಡಿಸಲು, ಜಾಕ್‍ವೆಲ್‍ನ್ನು ಶುಚಿಗೊಳಿಸಲು ಹಾಗೂ ಕೊಟ್ಟಾರ ಚೌಕಿ ಹೋಂಡಾ ಶೋ ರೂಂ ಎದುರು ಬದಿ 900 ಎಂ.ಎಂ. ವ್ಯಾಸದ ಮುಖ್ಯ ಕೊಳವೆಯಲ್ಲಿ ಸೋರುವಿಕೆ ಉಂಟಾಗಿದ್ದು ಇದರ ದುರಸ್ತಿ ಕಾರ್ಯವನ್ನು ಜನವರಿ 17ರಂದು ಪೂರ್ವಾಹ್ನ ಗಂಟೆ 6 ರಿಂದ ಸಂಜೆ 6 ಗಂಟೆಯವರೆಗೆ ಹಮ್ಮಿಕೊಂಳ್ಳಲಾಗಿದೆ.

ಈ ಅವಧಿಯಲ್ಲಿ ಮಂಗಳೂರು ನಗರ ಭಾಗಶ: ಪ್ರದೇಶ, ಕೋಡಿಕಲ್, ಕೊಟ್ಟಾರ ಜಲ್ಲಿಗುಡ್ಡ, ಕೂಳೂರು, ಪಣಂಬೂರು ಹಾಗೂ ಸುರತ್ಕಲ್, ಕಾಟಿಪಳ್ಳ ಪ್ರದೇಶಗಳಲ್ಲಿ ನೀರು ವಿತರಣೆಯನ್ನು ಸಂಪೂರ್ಣ ಸ್ಥಗಿತಗೊಳಿಸಲಾಗುವುದು ಎಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.

Comments are closed.