
ಚಾಮರಾಜನಗರ: ಬಿಜೆಪಿಯವರು, ಬಜರಂಗದಳ ಹಾಗೂ ಆರೆಸ್ಸೆಸ್‌ನವರೇ ಉಗ್ರಗಾಮಿಗಳು. ಬಿಜೆಪಿಯವರಿಗೆ ನಮ್ಮ ಬಗ್ಗೆ ಮಾತನಾಡುವ ಯಾವುದೇ ನೈತಿಕತೆಯಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸಮಾಜದ ಶಾಂತಿ ಕದಡುವ ಆರೆಸ್ಸೆಸ್ ಆಗಲಿ, ಪಿಎಫ್ ಐ ಆಗಲಿ ಮತ್ಯಾವುದೇ ಸಂಘಟನೆಯಾಗಲಿ, ನಾವು ಕ್ರಮ ತೆಗೆದುಕೊಳ್ಳುತ್ತೇವೆ. ವಿಧಾನ ಷರಿಷತ್ ಸದಸ್ಯರಿರಲಿ, ಕಾರ್ಯಕರ್ತರಿರಲಿ ಈ ಬಾರಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತೇವೆ ಎಂದು ಮುಖ್ಯಮಂತ್ರಿ ಹೇಳಿದರು.
ನಾಗವಳ್ಳಿಯಲ್ಲಿ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಸಿಎಂ, ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಪಿಎಫ್‌ಐ ನಂಟು ಎಂಬ ಶಂಕೆಯ ಬಗ್ಗೆ ನಮ್ಮ ಬಳಿ ಯಾವುದೇ ದಾಖಲೆಗಳಿಲ್ಲ. ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ತಾ.ಪಂ ಉಪಾಧ್ಯಕ್ಷನನ್ನು ದಬ್ಬಿದರು
ಬಿಜೆಪಿ ಮತ್ತು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸುವಾಗ ಆಕ್ಷೇಪಿಸಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಹಾಗೂ ಬಿಜೆಪಿ ಮುಖಂಡ ದಯಾನಿಧಿಯನ್ನು ಪೊಲೀಸರು ಹೊರಕ್ಕೆ ದಬ್ಬಿದರು. ಈ ಸಮಾವೇಶ ಆರಂಭಗೊಳ್ಳವ ಮುನ್ನವೇ ಜನರು ಫ್ಲೆಕ್ಸ್‌ಗಳನ್ನು ಕಿತ್ತುಕೊಂಡು ಹೋಗಿದ್ದಾರೆ.
Comments are closed.