ಮುಂಬೈ

ನೂತನ 10 ರೂ. ನೋಟು ಬಿಡುಗಡೆ; ಹೇಗಿದೆ ನೀವೇ ನೋಡಿ

Pinterest LinkedIn Tumblr


ಮುಂಬಯಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 10 ರೂ. ಮುಖಬೆಲೆಯ ನೂತನ ನೋಟನ್ನು ಬಿಡುಗಡೆ ಮಾಡಿದ್ದು, ಈ ನೋಟು ಪ್ರಸಕ್ತ ಚಾಲ್ತಿಯಲ್ಲಿರುವ ನೋಟಿನ ಅದೇ ಉದ್ದ ಹೊಂದಿದ್ದರೂ ಅಗಲ ಮಾತ್ರ ಕೊಂಚ ಕಡಿಮೆಯಾಗಿದೆ. ಮಹಾತ್ಮ ಗಾಂಧಿ ಸರಣಿಯ ಚಾಕಲೇಟ್ ಕಂದು ಬಣ್ಣದ ಈ ಹೊಸ ನೋಟುಗಳನ್ನು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಮುದ್ರಿಸಿದೆ.

ಬಣ್ಣ ಹಾಗೂ ವಿನ್ಯಾಸಕ್ಕೂ ಮಿಗಿಲಾಗಿ ನೂತನ ನೋಟಿನಲ್ಲಿ ಒಡಿಶಾದ ಕೋನರ್ಕ್ ಸೂರ್ಯ ದೇವಾಲಯದ ಚಿತ್ರವಿದೆ. ಪ್ರಸಕ್ತ ಚಲಾವಣೆಯಲ್ಲಿರುವ ನೋಟಿನಲ್ಲಿ ಆನೆ, ಹುಲಿ ಹಾಗೂ ಘೇಂಡಾಮೃಗದ ಚಿತ್ರವಿದೆ. 2005ರ ಮಹಾತ್ಮಾ ಗಾಂಧಿ ಸೀರೀಸ್‍ನಲ್ಲಿ ಬರಲಿರುವ ನೋಟುಗಳಲ್ಲಿ ಎರಡೂ ನಂಬರ್ ಪ್ಯಾನೆಲ್‍ನಲ್ಲಿ ಎಲ್ ಅಕ್ಷರ ಹಾಗೂ ಊರ್ಜಿತ್ ಪಟೇಲ್ ಅವರ ಹಸ್ತಾಕ್ಷರವಿರಲಿದೆ.

ಈ ಹಿಂದೆ ವಿತರಿಸಲಾಗಿರುವ ಎಲ್ಲಾ 10 ರೂ. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿರಲಿವೆ ಎಂದು ಆರ್‌ಬಿಐನ ಅಧಿಸೂಚನೆಯಲ್ಲಿ ಹೇಳಿದೆ. ಕಾಳಧನ ನಿಯಂತ್ರಣಕ್ಕಾಗಿ 2016ರಲ್ಲಿ ನೋಟು ಅಮಾನ್ಯೀಕರಣ ಮಾಡಿದ್ದ ಕೇಂದ್ರ ಸರಕಾರ ಇದಾದ ಬಳಿಕ ನೂತನವಾಗಿ ಬಿಡುಗಡೆಗೊಳಿಸಿದ ನೋಟುಗಳ ವಿನ್ಯಾಸ ಮತ್ತು ಬಣ್ಣವನ್ನು ಬದಲಿಸಿ ಹೆಚ್ಚಿನ ಭದ್ರತೆಯೊಂದಿಗೆ ಚಲಾವಣೆಗೆ ತರುತ್ತಿವೆ.

Comments are closed.