
ಬೆಂಗಳೂರು : ಇತ್ತಿಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಿರಾಟ್ ಕೊಹ್ಲಿ ಹಾಗು ಅನುಷ್ಕಾಶರ್ಮಾ ಅವರು ಆಗಾಗ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗುತ್ತಿದ್ದಾರೆ. ಸದ್ಯಕ್ಕೆ ಈ ಜೋಡಿ ಈಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು , ದಂಪತಿಗಳಿಬ್ಬರು ಕೇಪ್ ಟೌನ್ ಸುತ್ತುತ್ತಿದ್ದಾರೆ.
ಪತ್ನಿ ಅನುಷ್ಕಾ ಜೊತೆ ಜಾಲಿಯಾಗಿ ತಿರುಗಾಡುತ್ತಿರುವ ವಿರಾಟ್ ಅವರು ತಮ್ಮ ಪತ್ನಿಯ ಜೊತೆ ಫೋಟೋ ಒಂದನ್ನು ತೆಗೆದು ಅದನ್ನು ಟ್ವೀಟರ್ ನಲ್ಲಿ ಹಾಕಿದ್ದು, ಕೇಪ್ ಟೌನ್ ಬಹಳ ಸುಂದರವಾಗಿದೆ. ಆದರೆ ಅದಕ್ಕಿಂತ ಹೆಚ್ಚು ನನ್ನ ಒನ್ ಅಂಡ್ ಓನ್ಲಿ ಮಡದಿ ತುಂಬಾ ಸುಂದರವಾಗಿದ್ದಾಳೆ ಎಂದು ಟ್ವೀಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಅನೇಕ ಮಂದಿ ಅದಕ್ಕೆ ಕಮೆಂಟ್ ಮಾಡಿ ಎಂಜಾಯ್ ಮಾಡುತ್ತಿದ್ದಾರೆ.
Comments are closed.