ಕರ್ನಾಟಕ

ಪತ್ರಕರ್ತರಿಗೆ ಮೊಬೈಲ್ ಹಂಚಿದ ಉದ್ಯಮಿ

Pinterest LinkedIn Tumblr


ತುಮಕೂರು: ಹೊರವಲಯದ ಖಾಸಗಿ ಕ್ಲಬ್ ಒಂದರಲ್ಲಿ ಉದ್ಯಮಿಯೊಬ್ಬರು ಪತ್ರಕರ್ತರಿಗೆ ಮೊಬೈಲ್ ಹಂಚಿದ್ದಾರೆ. ಮಾಜಿ ಜಿ.ಪಂ ಸದಸ್ಯ ಕೃಷ್ಣಮೂರ್ತಿ ಅವರ ಹೆಸರಿನಲ್ಲಿ ಬೆಂಬಲಿಗರು ಪತ್ರಕರ್ತರಿಗೆ ಸ್ಯಾಮ್‌ಸಂಗ್‌ ಜೆ7ಮೊಬೈಲ್ ಹಂಚಿದ್ದಾರೆ.
ತುಮಕೂರು ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದಿಂದ ಪತ್ರಕರ್ತರಿಗೆ ಸರಕಾರದಿಂದ ರಿಯಾಯಿತಿ ದರದಲ್ಲಿ ನಿವೇಶನ ಹಂಚಿಕೆ ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಈ ಹಿಂದೆಯೇ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ ಜಯಚಂದ್ರರಿಗೆ ಮನವಿ ಸಲ್ಲಿಸಲಾಗಿತ್ತು.

ಈ ಬಗ್ಗೆ ಸಚಿವ ಟಿ.ಬಿ ಜಯಚಂದ್ರ ಅವರೊಂದಿಗೆ ಚರ್ಚೆ ನಡೆಸಲು ಕಾರ್ಯ ನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಾನುವಾರ ನಗರ ಹೊರ ವಲಯದ ಕ್ಲಬ್ ಒಂದರಲ್ಲಿ ಸಭೆ ಕರೆಯಲಾಗಿತ್ತು.

ಸಭೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ವಾಪಸ್‌ ಹೊರಡುವ ವೇಳೆ ಕೆಲವು ಪತ್ರಕರ್ತರಿಗೆ ಮೊಬೈಲ್‌ ನೀಡಿದ್ದು, ಮೊಬೈಲ್‌ ಹಂಚಿದ ಉದ್ಯಮಿ ಸಚಿವ ಟಿ.ಬಿ ಜಯಚಂದ್ರ ಅವರ ಅಪ್ತ ಎನ್ನಲಾಗಿದೆ.

Comments are closed.