
ಹೊಸದಿಲ್ಲಿ: ಕುಲಭೂಷಣ್ ಜಾಧವ್ ಅವರ ಪತ್ನಿ ಹಾಗೂ ತಾಯಿಗೆ ಇಸ್ಲಾಮಾಬಾದ್ ರಾಯಭಾರಿ ಕಚೇರಿಯಲ್ಲಿ ಎಸಗಲಾದ ಅವಮಾನಕ್ಕೆ ಪ್ರತಿಯಾಗಿ ಇಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಗೆ ದಾನ ಮಾಡುವುದಕ್ಕಾಗಿ ಬಿಜೆಪಿ ಮುಖಂಡರೊಬ್ಬರು ಒಂದು ಜೊತೆ ಚಪ್ಪಲಿಗೆ ಆರ್ಡರ್ ನೀಡಿದ್ದಾರೆ.
ಆನ್‌ಲೈನ್ ಆರ್ಡರ್‌ನ ಸ್ಕ್ರೀನ್‌ಶಾಟ್‌ಅನ್ನು ಶುಕ್ರವಾರ ಟ್ವೀಟ್ ಮಾಡಿರುವ ಬಿಜೆಪಿ ದಿಲ್ಲಿ ಘಟಕದ ವಕ್ತಾರ ತಾಜಿಂದರ್ ಬಗ್ಗಾ ಅವರು, ಜಾಧವ್ ಕುಟುಂಬಕ್ಕಾದ ಅವಮಾನವನ್ನು ಪ್ರತಿಭಟಿಸಿ ಪಾಕ್ ರಾಯಭಾರಿಗೆ ದಾನ ಮಾಡಲು ಚಪ್ಪಲಿಗೆ ಆರ್ಡರ್ ಮಾಡುವಂತೆ ತಮ್ಮ ಬೆಂಬಲಿಗರಿಗೂ ಮನವಿ ಮಾಡಿದ್ದಾರೆ.
Comments are closed.