ಕರಾವಳಿ

ಉಡುಪಿ‌ ಸಿಟಿ ಬಸ್ ನೌಕರರ ಮಾನವೀಯತೆ; ಪುಟ್ಟ ಕಂದಮ್ಮನ ಚಿಕಿತ್ಸೆಗೆ ನೆರವು

Pinterest LinkedIn Tumblr

ಉಡುಪಿ: ಕಾರ್ಕಳದ ಮಜೂರಿನ‌ 5 ವರುಷದ ಪುಟ್ಟ ಬಾಲಕಿ ವಂಶಿಕ ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಬಡ ಕುಟುಂಬವಾದ ಕಾರಣ ಈಕೆಯ ಚಿಕಿತ್ಸೆಗೆ ತಗಲುವ ಹತ್ತು‌ ಲಕ್ಷ ರೂಪಾಯಿ ಹೊಂದಿಸಲು ಈಕೆಯ ತಂದೆ ತಾಯಿಗೆ ಸಾಧ್ಯವಾಗುತ್ತಿಲ್ಲ. ಸುಮಾರು ಹತ್ತು ಲಕ್ಷ ರೂಪಾಯಿಗಳು ಚಿಕಿತ್ಸಾ ವೆಚ್ಚಕ್ಕೆ ಬೇಕಾಗಿದ್ದು ,ದಾನಿಗಳ ಸಹಾಯ ಹಸ್ತಕ್ಕೆ ಹೆತ್ತವರು ಕೈ ಚಾಚಿದ್ದಾರೆ.

ಈ‌ ಬಗ್ಗೆ ಮಾಹಿತಿ ತಿಳಿದ ಉಡುಪಿ‌ ಬಸ್ ನೌಕರರ ಸಂಘ ಪುಟ್ಟ ಕಂದಮ್ಮನ‌ ಚಿಕಿತ್ಸೆಗೆ ಹಣ ಸಂಗ್ರಹಿಸಲು ಮುಂದಾಗಿದೆ. ಉಡುಪಿ ನಗರದಲ್ಲಿ ಸಂಚರಿಸುವ ೨೦ ಬಸ್ಸುಗಳಲ್ಲಿ ವಂಶಿಕ ಚಿಕಿತ್ಸೆಗಾಗಿ ದೇಣಿಗೆ ಸಂಗ್ರಹದ ಡಬ್ಬಿಗಳನ್ನ ಇಡಲಾಗಿದೆ. ಸಾರ್ವಜನಿಕರು ಪುಟ್ಟ ಕಂದಮ್ಮಳ ಪ್ರಾಣ ಉಳಿಸಲು ಈ ಡಬ್ಬಿಯಲ್ಲಿ ಹಣ ಹಾಕುವಂತೆ ಬಸ್ ನೌಕರರು ವಿನಂತಿಸಿದ್ದಾರೆ.

ಸಿಟಿ ಬಸ್ ನೌಕರರ ಈ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

Comments are closed.