ತಾಯಿಯಾದವಳಿಗೆ ತನ್ನ ಮಗುವಿನ ಚಲನವಲನಗಳು ಸೂಕ್ಷ್ಮವಾಗಿ ತಿಳಿದಿರುತ್ತದೆ. ಮಗು ಅತ್ತಾಗ ಏನು ಮಾಡಬೇಕು, ನಿದ್ರೆ ಬಂದಾಗ ಏನು ಮಾಡಬೇಕು, ಇವೆಲ್ಲವುದರ ಅರಿವು ತಾಯಿಗಿರುತ್ತದೆ. ಅದಕ್ಕಾಗಿಯೇ ತಾನೇ, ತಾಯಿಯನ್ನು ಪೂಜನೀಯ ಭಾವದಿಂದ ನಾವು ಗೌರವಿಸುವುದು.
ಮಗುವಿನ ಹಾವ-ಭಾವದಲ್ಲಿ ಸ್ವಲ್ಪ ಬದಲಾವಣೆಯಾದರು, ಮೊದಲು ತಿಳಿಯುವುದು ತಾಯಿಯಾದವಳಿಗೆಯೇ. ನಿಮ್ಮ ಮುದ್ದು ಕಂದಮ್ಮಗಳು, ತಮ್ಮ ವಯಸ್ಸಿಗೆ ಅನುಗುಣವಾಗಿ ಬೆಳವಣಿಗೆ ಹೊಂದುತ್ತಿವೆಯೇ? ಬೇರೆ ಮಕ್ಕಳಿಗೆ ಹೋಲಿಸಿದರೆ, ನಿಮ್ಮ ಮಗು ಎಲ್ಲರಿಗಿಂತ ನಿಧಾನವಾಗಿ ಬೆಳವಣಿಗೆಯ ಮೈಲಿಗಲ್ಲನ್ನು ಮುಟ್ಟುತಿದೆಯೇ?
ಶಾರೀರಿಕ ಬೆಳವಣಿಗೆ, ಮಾನಸಿಕ ಬೆಳವಣಿಗೆಯಲ್ಲಿ ಸ್ವಲ್ಪ ಏರು ಪೇರು ಕಂಡು ಬಂದರೆ, ನೀವು ಏನು ಮಾಡಬೇಕು, ಯಾವ ಸಮಯದಲ್ಲಿ ವೈದ್ಯರನ್ನು ಕಾಣಬೇಕು ಎಂಬುದನ್ನು ನಾವು ನಿಮಗೆ ಇಲ್ಲಿ ವಿವರಿಸುತ್ತೇವೆ.
ಕುಂಟಿತ ಬೆಳವಣಿಗೆಯ ಕಾರಣಗಳೇನು?
ನಿಮ್ಮ ಮಗು, ಅದರ ವಯಸ್ಸಿನ ಮಕ್ಕಳಿಗಿಂತ ನಿಧಾನವಾಗಿ ಬೆಳವಣಿಗೆ ಹೊಂದುವುದಕ್ಕೆ downs syndrome ಕೂಡ ಒಂದು ಕಾರಣವಾಗಿದೆ. ಇದಲ್ಲದೆ ವಂಶವಾಹಿಯ ತೊಂದೆರೆ ಇರಬಹುದು ಅಥವಾ ಯಾವುದಾದರು ಅಪಘಾತದ ಕಾರಣವಿರಬಹುದು. ನಿಮ್ಮ ಕಂದಮ್ಮಗಳಿಗೆ ಮೊದಲಬಾರಿ ಮಾತನಾಡುವುದಕ್ಕೆ ತೊಂದರೆಯಾದರೆ, ಅದು ಅವರ ಗಂಟಲಿನೊಳಗಿರುವ ಧ್ವನಿ ಪೆಟ್ಟಿಗೆ ಅಥವಾ ಕಿವುಡುತನದ ಕಾರಣಗಳಿಂದ ಹೀಗಾಗವು ಸಾಧ್ಯತೆಗಳು ಹೆಚ್ಚು.
ಕಣ್ಣಿನ ದೃಷ್ಟಿಯಲ್ಲಿ ಮಗುವಿಗೆ ತೊಂದರೆ ಇದೆ ಎಂಬುದು ಅಷ್ಟು ಸುಲಭವಾಗಿ ಪೋಷಕರಿಗೆ ತಿಳಿಯುವುದಿಲ್ಲ. ಇದಕ್ಕಾಗಿ ನೀವು ತಿಂಗಳಿಗೊಮ್ಮೆ ಮಕ್ಕಳ ತಜ್ಞರನ್ನು ಸಂಪರ್ಕಿಸಬೇಕು. ಹೀಗೆ ಪ್ರತಿ ತಿಂಗಳು ಮಕ್ಕಳ್ಳನ್ನು ಸಾಮಾನ್ಯ ಪರೀಕ್ಷೆಗೆ ವೈದ್ಯರ ಬಳಿ ಕರೆದುಕೊಂಡು ಹೋಗುವುದರಿಂದ, ನಿಮ್ಮ ಕಂದಮ್ಮಗಳು ಸರಿಯಾದ ಹಂತಕ್ಕೆ ಬೆಳವಣಿಗೆಯ ಮೈಲಿಗಲ್ಲನ್ನು ಮುಟ್ಟುತ್ತಿದ್ದಾರೆಯೇ/ಇಲ್ಲವೇ ಎಂಬುದು ನಿಮಗೆ ಸುಲಭವಾಗಿ ತಿಳಿಯುತ್ತದೆ.
ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?
ಮಕ್ಕಳ ಬೆಳವಣಿಗೆಯ ಮೈಲಿಗಲ್ಲಿನ ಸಂಪೂರ್ಣ ವಿವರ ನಿಮಗೆ ತಿಳಿದ್ದಿದರೆ, ಕೂಡಲೇ ನೀವು ವೈದ್ಯರನ್ನು ಕಾಣಬಹುದು. ಕೆಲವೊಂದು ಬಾರಿ ತಾಯಂದಿರು ಮಕ್ಕಳು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುವ ವಯಸ್ಸಾದರು, ಇನ್ನೂ ಅಂಬೆಗಾಲು ಹಾಕುತ್ತಿರುವುದನ್ನು ಅಸಡ್ಡೆ ಮಾಡುತ್ತಾರೆ.
ದಿನ ಕಳೆದಂತೆ ತಾವಾಗೆಯೇ ಕಲಿಯುತ್ತಾರೆ ಎಂದು ಸುಮ್ಮನಾಗುತ್ತಾರೆ. ಆದರೆ ಅಷ್ಟರೊಳಗಾಗಲೇ ಮಗುವಿನ ಸಮಸ್ಯೆ ಮತ್ತಷ್ಟು ಇಮ್ಮಡಿಗೊಂಡಿರುತ್ತದೆ. ಆದ್ದರಿಂದ ತಾಯಂದಿರೇ, ಇಂತಹ ವಿಷಯಗಳ್ಳನ್ನು ಅಸಡ್ಡೆ ಮಾಡದೆ, ವೈದ್ಯರ ಬಳಿ ಮುಕ್ತವಾಗಿ ಹಂಚಿಕೊಳ್ಳಿ. ಇದರಿಂದ ಮುಂದಾಗುವ ಸಮಸ್ಯೆಯನ್ನು ನೀವು ತಡೆಯಬಹುದು. ಕೆಲವೊಂದು ರೋಗಗಳಿಗೆ ಪ್ರಾರಂಭಿಕ ಅವಸ್ಥೆಯಲ್ಲಿ ಚಿಕಿತ್ಸೆ ನೀಡುವುದರಿಂದ ಗುಣಪಡಿಸಬಹುದೇ ಹೊರತು, ತೀವ್ರಕೊಂಡಾಗ ಕಷ್ಟ ಸಾದ್ಯ ಎಂಬುದನ್ನು ನೀವು ಮರೆಯದಿರಿ.
ಈ ಲೇಖನ ನಿಮಗೆ ಉಪಯುಕ್ತವೆನಿಸಿದರೆ, ನಿಮ್ಮಂತೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿವಹಿಸುವ ಸಾವಿರಾರು ತಾಯಂದಿರೊಂದಿಗೆ ಇದನ್ನು ಹಂಚಿಕೊಳ್ಳಿ.

Comments are closed.