
ತೆಲುಗು, ತಮಿಳು, ಕನ್ನಡವೂ ಸೇರಿ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲೂ ನಟಿಸಿದ್ದ ಇಲಿಯಾನಾ ಹೊಸ ವರ್ಷಕ್ಕೆ ಮುನ್ನವೇ ಮದುವೆಯಾಗಿದ್ದಾರೆ. ಈ ವಿಷಯವನ್ನು ತಮ್ಮ ಇನ್ಸ್ಸ್ಟಾಗ್ರಾಂನಲ್ಲಿ ಹೇಳಿರುವ ಇಲಿಯಾ, ಮದುವೆ ಯಾವಾಗ, ಎಲ್ಲಿ ಆಯಿತು ಎಂಬುದನ್ನು ಹೇಳಿಲ್ಲ.
ಆಸ್ಪ್ರೇಲಿಯಾದ ಫೋಟೋಗ್ರಾಫರ್ ಆ್ಯಂಡ್ರೂ ನಿಬೋನ್ ಜತೆ ಲವ್ವಲ್ಲಿದ್ದ ಇಲಿಯಾನ, ಮದುವೆಯ ಬಗ್ಗೆ ಕೇಳಿದಾಗಲೆಲ್ಲ ಸದ್ಯಕ್ಕಿಲ್ಲ ಎಂದೇ ಹೇಳುತ್ತಿದ್ದರು. ಈಗ ನೋಡಿದರೆ ಇನ್ಸ್ಸ್ಟಾಗ್ರಾಂನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿ, ಇದು ನನ್ನ ಹಬ್ಬಿ ತೆಗೆದ ಫೋಟೋ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಅಲ್ಲಿಗೆ ಮದುವೆ ಆಗಿರುವುದು ಪಕ್ಕಾ ಆಗಿದೆ.
ಕ್ರಿಸ್ಮಸ್ ಟ್ರೀ ಅನ್ನು ಡೆಕೋರೇಟ್ ಮಾಡುತ್ತಿರುವ ಇಲಿಯಾನ ಫೋಟೋ ಸದ್ಯಕ್ಕೆ ವೈರಲ್ ಆಗಿದೆ. ಹ್ಯಾಷ್ಟ್ಯಾಗ್ನಲ್ಲಿ 2017 ನನಗೆ ತುಂಬಾ ಇಷ್ಟವಾದ ವರ್ಷ. ಕ್ರಿಸ್ಮಸ್ ಟೈಂ, ಹ್ಯಾಪಿ ಹಾಲಿಡೇಸ್ ಎಂದು ಬರೆದಿದ್ದಾರೆ.
Comments are closed.