ಕರ್ನಾಟಕ

ವಿದ್ಯಾರ್ಥಿನಿಯ ಅತ್ಯಾಚಾರಕ್ಕೆ ಯತ್ನ: ಬಿಜೆಪಿ ಮುಖಂಡ ಸೆರೆ

Pinterest LinkedIn Tumblr


ರಾಯಚೂರು: ಬಿಜೆಪಿಯ ಮುಖಂಡನಿಂದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿರುವುದಾಗಿ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ದೇವದುರ್ಗ ಪಟ್ಟಣದ ಹೊರವಲಯದ ಹಿಂದೂಸ್ತಾನ ಹತ್ತಿ ಗಿರಣಿ ಬಳಿ ಘಟನೆ ನಡೆದಿದೆ. ಯಲ್ಲಪ್ಪ ಆಲ್ದರ್ತಿ ಎಂಬಾತ ಎಂ‌.ಕಾಂ. ಪರೀಕ್ಷೆ ಬರೆಯಲು ಬಂದಿದ್ದ ಹೊಸಪೇಟೆ ಮೂಲದ 24 ವರ್ಷದ ವಿದ್ಯಾರ್ಥಿನಿಯನ್ನು ಕಾರಿನಲ್ಲಿ ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಆರೋಪಿ ಯಲ್ಲಪ್ಪ ಆಲ್ದರ್ತಿಯನ್ನು ದೇವದುರ್ಗ ಠಾಣೆ ಪೊಲೀಸರು ಬಂಧಿಸಿದ್ದಾರೆ.

Comments are closed.