ಕರ್ನಾಟಕ

ಆತ್ಮಹತ್ಯೆಗೆ ಯುವತಿ ಯತ್ನ: ಪ್ರಾಣವುಳಿಸಿದ ರೈಲು ಚಾಲಕ

Pinterest LinkedIn Tumblr


ಕಲಬುರಗಿ: ಕೋರಂಟಿ ಹನುಮಾನ ದೇವಸ್ಥಾನ ಸಮೀಪ ರೈಲಿಗೆ ತಲೆಕೊಟ್ಟು ಇಪ್ಪತ್ತು ವರ್ಷದ ಯುವತಿ ಆತ್ಮಹತ್ಯೆಗೆ ಯತ್ನಿಸಿದ್ದು, ರೈಲು ಚಾಲಕ ಸಮಯಪ್ರಜ್ಞೆಯಿಂದ ಪ್ರಾಣವುಳಿದಿದೆ.

ಬೆಳಗ್ಗೆ ಚೆನ್ನೈ – ದಾದರ್ ಎಕ್ಸಪ್ರೆಸ್ ರೈಲಿಗೆ ಸಿಲುಕಿ ಯುವತಿಯ ಬಲಗಾಲು ತುಂಡಾಗಿದೆ. ತಲೆ ಮತ್ತು ಭುಜಕ್ಕೆ ಸಣ್ಣಪುಟ್ಟ ಗಾಯವಾಗಿದೆ. ರೈಲು ಹಳಿ ಮೇಲೆ ಯುವತಿಯನ್ನು ಕಂಡು ಚಾಲಕ ರೈಲು ನಿಲ್ಲಿಸಿದ್ದು, ಗಾಯಗೊಂಡ ಯುವತಿಯವನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಐಸಿಯು ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದ್ದು, ಯುವತಿಯ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವೈದ್ಯರು ಹೇಳುವಂತೆ ಯುವತಿ ಮಾತನಾಡುವ ಸ್ಥಿತಿಯಲ್ಲಿಲ್ಲ. ಆದರೂ ಅಪಾಯದಿಂದ ಪಾರಾಗಿದ್ದಾಳೆ.

ಯುವತಿಯ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕಲು ಪೊಲೀಸರು ನಗರದ ಎಲ್ಲ ಶಾಲಾ ಕಾಲೇಜು ಮತ್ತು ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿರುವುದಾಗಿ ವಾಡಿ ರೈಲ್ವೆ ಪೊಲೀಸ್ ಠಾಣೆಯ ಎಎಸ್ ಐ ವಿಜಯಕುಮಾರ್ ತಿಳಿಸಿದ್ದಾರೆ. ವಾಡಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.