ನಮ್ಮ ಮೇಲೆ ಅದೃಷ್ಟ ದೃಷ್ಟಿ ಬೀರದಿದ್ದರೆ, ಎಷ್ಟೇ ಕಷ್ಟಪಟ್ಟರೂ ಪ್ರಯೋಜನವಿರುವುದಿಲ್ಲ. ಒಂದು ಪುಟ್ಟ ಘಟನೆ ಯಾವುದೇ ಒಬ್ಬ ವ್ಯಕ್ತಿಯ ಜೀವನದ ಗತಿಯನ್ನೇ ಬದಲಿಸಬಹುದು. ಈ ಕೆಳಗಿನ ಘಟನೆಯನ್ನು ನೋಡಿ….
ಈ ಘಟನೆ ಜರುಗಿದ್ದು ಉತ್ತರಾಖಂಡದ ಹರಿದ್ವಾರದಲ್ಲಿ. ಇದು ಇತ್ತೀಚೆಗೆ ಬಯಲಾಯಿತು. ಒಂದೇ ಒಂದು ಘಟನೆಯಿಂದ ಒಬ್ಬ ಬಿಕ್ಷುಕನ ಜೀವನ ಬದಲಾಯಿತು. ಅಲ್ಲದೆ ಒಬ್ಬ ತಂದೆ ಮತ್ತು ಮಗ ಆ ಬಿಕ್ಷುಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಇದಕ್ಕೆ ಕಾರಣವೇನೆಂದರೆ. ಒಬ್ಬ ವ್ಯಕ್ತಿ ತನ್ನ ತಂದೆಗೆ ಗೊತ್ತಿಲ್ಲದೆ ತನ್ನ ಮನೆಯಲ್ಲಿದ್ದ ಹಾಸಿಗೆಯನ್ನು ಒಬ್ಬ ಬಿಕ್ಷುಕನಿಗೆ ನೀಡಿದ್ದಾನೆ.
ತನ್ನ ತಂದೆ ಮಲಗುತ್ತಿದ್ದ ಹಾಸಿಗೆ ಹರಿದಿರುವುದನ್ನು ನೋಡಿ ಆ ಮಗ ತನ್ನ ತಂದೆಗೆ ತಿಳಿಸದೆ ‘ ದರಿದ್ರ ಭಂಜನ್’ ಮಂದಿರದ ಮುಂದೆ ಕುಳಿತಿದ್ದ ಒಬ್ಬ ಬಿಕ್ಷುಕನಿಗೆ ಅದನ್ನು ಕೊಟ್ಟುಬಿಟ್ಟ. ಮನೆಗೆ ಬಂದ ತಂದೆ ತನ್ನ ಹಾಸಿಗೆಯ ಬಗ್ಗೆ ಮಗನಲ್ಲಿ ವಿಚಾರಿಸಿದ. ಅದನ್ನು ಬಿಕ್ಷುಕನಿಗೆ ನೀಡಿದ ಮಾತನ್ನು ಕೇಳಿ ಆತನ ಹೃದಯ ಒಡೆದು ಹೋದಂತಾಯಿತು. ಯಾಕೆಂದರೆ…ತನ್ನ ಜೀವನವಿಡೀ ಕೂಡಿಟ್ಟ ಹಣವನ್ನು ಆ ಹಾಸಿಗೆಯ ಒಳಗೆ ಅಡಗಿಸಿಟ್ಟಿದ್ದ. ಸುಮಾರು 40 ಲಕ್ಷ ರೂಪಾಯಿಗಳಿದ್ದವು. ಈ ಮಾತನ್ನು ಕೇಳಿದ ತಕ್ಷಣ ತಂದೆ ಮತ್ತು ಮಗ ಇಬ್ಬರೂ ಸೇರಿ ಆ ಬಿಕ್ಷುಕನಿಗಾಗಿ ಹುಡುಕಾಟ ನಡೆಸಿದರು.
ಮೂರು ದಿನಗಳ ನಂತರ ಆ ಬಿಕ್ಷುಕ ದೊರೆತನಾದರೂ …ಆ ಹಾಸಿಗೆಯನ್ನು ಆತ ಮತ್ತೊಬ್ಬ ಬಿಕ್ಷುಕನಿಗೆ ಮಾರಿಬಿಟ್ಟಿದ್ದ. ಪೊಲೀಸರಿಗೆ ದೂರು ನೀಡಿದರೂ ಆ ಬಿಕ್ಷುಕ ಸಿಗುತ್ತಿಲ್ಲ. ಬಿಕ್ಷುಕನ ಜೀವನದ ಗತಿ ಬದಲಾದದ್ದನ್ನು ಎಲ್ಲರೂ ಅಚ್ಚರಿಯಿಂದ ಮಾತನಾಡಿಕೊಳ್ಳುತ್ತಿದ್ದಾರೆ.

Comments are closed.