
ಅಲ್ವಾರ್: ಡೋಲ್ಪುರದ ಸಾಮ್ರಾಟ್ಪುರ ಗ್ರಾಮದಲ್ಲಿ ಮಗಳು ಹುಡುಗನೊಬ್ಬನನ್ನು ಪ್ರೀತಿಸುತ್ತಿದ್ದಳೆಂಬ ಕಾರಣಕ್ಕೆ ತಂದೆ ಮತ್ತು ಮನೆಯವರು ಸೇರಿ ಮಂಚಕ್ಕೆ ಕಟ್ಟಿ ಸೂಟ್ ಮಾಡಿ ಸಾಯಿಸಿದ್ದಾರೆ.
ಪಿಯುಸಿ ಓದುತ್ತಿದ್ದ ಹದಿನೇಳು ವರ್ಷದ ಹುಡುಗಿ ಸಹಪಾಠಿಯೊಬ್ಬನನ್ನು ಪ್ರೀತಿಸುತ್ತಿದ್ದಳು, ಹುಡುಗನನ್ನು ಪ್ರೀತಿಸಬೇಡ ಎಂದು ತಂದೆ ಹೇಳಿದಾಗ ಹುಡುಗಿ ವಿರೋಧಿಸಿದ್ದಾಳೆ. ಹೀಗಾಗಿ ಆಕೆಯನ್ನು ಮನೆಯಿಂದ ಹೊರ ಹೋಗಲು ಬಿಡದೆ ಮಂಚಕ್ಕೆ ಕಟ್ಟಿ ಹಾಕಿ ತಂದೆ ಶೂಟ್ ಮಾಡಿದ್ದಾನೆ. ಬಳಿಕ ಮನೆಯವರೆಲ್ಲ ಸೇರಿ ಸ್ಮಶಾನಕ್ಕೆ ಒಯ್ದು ಮೃತದೇಹವನ್ನು ಸುಟ್ಟು ಹಾಕಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಹುಡುಗಿಯ ತಂದೆ ಬನೆ ಸಿಂಗ್, ಚಿಕ್ಕಪ್ಪ ಉದಯ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದು, ಇತರ ಸದಸ್ಯರ ವಿಚಾರಣೆ ನಡೆಸುತ್ತಿದ್ದಾರೆ.
ಸಾಮ್ರಾಟ್ಪುರದಲ್ಲಿ ಬಾಡಿಗೆ ಮನೆಯಲ್ಲಿದ್ದ ಮಗಳನ್ನು ನೋಡಲೆಂದು ತಂದೆ ಬನೆ ಸಿಂಗ್ ಹೋಗಿದ್ದಾಗ ಆಕೆ ಇರಲಿಲ್ಲ, ಸಂಜೆಯವರೆಗೆ ಕಾದರೂ ಬರಲಿಲ್ಲ. ಮರುದಿನ ಆಕೆಯನ್ನು ಮನೆಗೆ ಕರೆದುಕೊಂಡು ಬಂದು ಹುಡುಗನನ್ನು ಭೇಟಿ ಮಾಡಬಾರದು ಎಂದು ತಾಕೀತು ಮಾಡಿದ್ದರು. ಆಕೆ ವಿರೋಧಿಸಿದ್ದಾಳೆ. ಸಿಟ್ಟಿಗೆದ್ದ ತಂದೆ ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ಮಂಚಕ್ಕೆ ಕಟ್ಟಿ ಪಿಸ್ತೂಲ್ನಿಂದ ಶೂಟ್ ಮಾಡಿದ್ದಾನೆ.
ಪಕ್ಕದ ಮನೆಯ ನಿವಾಸಿಗಳು ನೀಡಿದ ದೂರು ಆಧರಿಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
Comments are closed.