
ಮುಂಬಯಿ : ಹದಿನಾರರ ಹರೆಯದ ಆದಿವಾಸಿ ಮಹಿಳೆ ವೈಶಾಲಿ ವಾಘ್ ಮಾರೆ ರಾಯಗಡ್ ಜಿಲ್ಲೆಯ ಪೆನ್ ಲ್ಲಿ ತನ್ನ ಮಾವನ ಮನೆಯಲ್ಲಿ ವಾಸವಾಗಿದ್ದು, ಆಕೆಗೆ ಥಾಣೆ ಜಿಲ್ಲೆಯ ಬಾಯಂಧರಿನಲ್ಲಿ ತನ್ನ ಸ್ವಂಥ ಮನೆಯೊಂದು ಇದೆಯೆಂಬುದರ ಅರಿವೇ ಇಲ್ಲ.
ಬಾಯಂಧರ್ ಪಶ್ಚಿಮದ ಫಾದ್ರಿ ತಲಾವಿನ ಗುಡಿಸಲಲ್ಲಿ ವಾಸಿಸುತ್ತಿದ್ದ 32 ಕುಟುಂಬದವರ ಸ್ಥಳವನ್ನು ಮೀರಾ ಭಾಯಂಧರ್ ಮಹಾನಗರ ಪಾಲಿಕೆಯು 2004 ರಲ್ಲಿ ತನ್ನ ಸ್ವಾಧೀನಕ್ಕೆ ಪಡೆದಿದ್ದು, ಇವರು ರಸ್ತೆ ಬದಿಯಲ್ಲಿ ವಾಸಿಸಬೇಕಾಯಿತು. 2009 ರಲ್ಲಿ ಇವರಿಗೆ ಬಾಡಿಗೆಯ ಮನೆಯಲ್ಲಿ ನೆಲೆಸುವ ಸೌಲಭ್ಯ ದೊರಕಿದ್ದು ತಿಂಗಳಿಗೆ ನೂರು ರೂಪಾಯಿ ಬಾಡಿಗೆಯನ್ನು ತೆರಬೇಕಾಯಿತು.
31 ಮನೆಯವರು ಈ ಸೌಲಭ್ಯವನ್ನು ಪಡೆದರು. ಈಕೆಯ ತಂದೆ ಪ್ರಕಾಶ್ ವಾಘೆ ತನ್ನ ಕುಟುಂಬದೊಂದಿಗೆ ರಸ್ತೆಬದಿಯಲ್ಲೇ ವಾಸಿಸುತ್ತಿದ್ದರು. ಪತ್ನಿಯ ನಿಧನದ ನಂತರ ತಂದೆ ಏಳು ವರ್ಷ ಪ್ರಾಯದ ವೈಶಾಲಿಯನ್ನು ರಾಯಗಡ್ ಜಿಲ್ಲೆಯ ಪೆನ್ ನ ತನ್ನ ಮಾವನ ಮನೆಗೆ ಕಳುಹಿಸಿದ.

ರೋಹಿತ್ ಸುವರ್ಣ
2011 ರಲ್ಲಿ ಪ್ರಕಾಶ್ ವಾಘೆಯ ನಿಧನದ ನಂತರ ಮೀರಾ ಭಾಯಂಧರ್ ನ ಮಾಜಿ ನಗರ ಸೇವಕ, ಕನ್ನಡಿಗ, ಸ್ಥಳೀಯ ಸಮಾಜ ಸೇವಕ ರೋಹಿತ್ ಸುವರ್ಣ ಅವರು ವಾಘೆಯ ವಾರೀಸುದಾರಳ ಪರವಾಗಿ ಪ್ರತೀ ತಿಂಗಳು ನೂರು ರೂಪಾಯಿ ಬಾಡಿಗೆಯನ್ನು ಪಾವತಿ ಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಕಟ್ಕರಿ ಸಮುದಾಯದ ಈ 32 ಕುಟುಂಬಕ್ಕೆ ಮೀರಾ ಬಾಯಂದರ್ ಮಹಾನಗರ ಪಾಲಿಕೆಯ ಗೃಹ ವಿಭಾಗದಿಂದ ಬಾಯಂದರ್ ನ ಇಂದ್ರಲೋಕ್ ಎಂಬಲ್ಲಿ 215 ಚದರ ಅಡಿಯ ಮನೆಯು ಪ್ರಾಪ್ತವಾಗಿದ್ದು 31 ಕುಟುಂಬವು ತನ್ನ ಸ್ವಂಥ ಮನೆಗೆ ವರ್ಗಾವಣೆಯಾದರು.
2009 ರಲ್ಲಿ ಪ್ರಕಾಶ್ ಅವರು ವೈಶಾಲಿ ತನ್ನ ಮಗಳೆಂದು ನಗರ ಪಾಲಿಕೆಗೆ ಪ್ರಮಾಣ ಪತ್ರವನ್ನು ನೀಡಿದ್ದರು. ಇತ್ತೀಚೆಗೆ ಮಹಾನಗರ ಪಾಲಿಕೆಯು ಪ್ರಕಾಶ್ ನ ವಾರೀಸುದಾರರು ಇಲ್ಲದೇ ಇದ್ದಲ್ಲಿ ಅತನ ಮನೆಯನ್ನು ಆತನ ಹತ್ತಿರದ ಹಕ್ಕುದಾರರಿಗೆ ನೀಡುವ ನಿರ್ಧಾರವನ್ನು ಕೈಗೊಳ್ಳುತ್ತಿತ್ತು. ಆ ಸಮಯದಲ್ಲಿ ರೋಹಿತ್ ಸುವರ್ಣ ಅವರು “ಪ್ರಕಾಶ್ ಗೆ ಓರ್ವ ಮಗಳಿದ್ದಾಳೆ ಮತ್ತು ಆಕೆ ಪೆನ್ ಲ್ಲಿ ವಾಸವಾಗಿದ್ದಾಳೆ ಎಂದು ನನಗೆ ಗೊತ್ತು. ಆಕೆಯನ್ನು ಹುಡುಕುವಲ್ಲಿ ನಾನು ಕೊನೆಯ ಪ್ರಯತ್ನವನ್ನು ಮಾಡುವೆನು” ಎಂದು ನಗರ ಪಾಲಿಕೆಗೆ ತಿಳಿಸಿದರು.
ಇತ್ತೀಚೆಗೆ ಮತ್ತೆ ರೋಹಿತ್ ಸುವರ್ಣ ಅವರು ಕಟ್ಕರಿ ಸಮುದಾಯದ ಕೆಲವು ಸದಸ್ಯರನ್ನು ಕರೆದುಕೊಂಡು ಪೆನ್ ಗೆ ಹೊರಟರು. ಆಕೆಯೊಂದಿಗೆ ಶಾಲೆಯಲ್ಲಿ ಓದುತ್ತಿದ್ದ ಆಕೆಯ ಸಂಗಾತಿಯ ಸಹಾಯದಿಂದ ಆಕೆ ಈಗ ನೆಲೆಸಿರುವ ಆಕೆಯ ಗಂಡನ ಮನೆಯನ್ನು ತಲಪಲುವಲ್ಲಿ ಯಶಸ್ವಿಯಾದರು. ಇದೇ ನವೆಂಬರ 12ರಂದು 24 ತಾಸುಗಳ ಪ್ರಯತ್ನದ ಫಲವಾಗಿ ರೋಹಿತ್ ಸುವರ್ಣ ಆಕೆಯನ್ನು ಕಂಡು ಹುಡುಕಿ ವಿಷಯ ತಿಳಿಸಿದರು.
ಆರು ತಿಂಗಳ ಮಗುವನ್ನು ಹೊಂದಿದ ಆಕೆಗೆ ಎಲ್ಲಿಲ್ಲದ ಸಂತಸ. ಆಕೆಯ ತಂದೆ ಪ್ರಮಾಣ ಪತ್ರವನ್ನು ಪಾಲಿಕೆಗೆ ನೀಡಿದ್ದರೂ ಆತನಿಗೆ ಪ್ಲಾಟ್ ಸಿಕ್ಕುವ ಬಗ್ಗೆ ಆತ ತನ್ನ ಸಂಮಂದಿಕರಿಗೂ ತಿಳಿಸಲಿಲ್ಲ. ಈ ರೀತಿ ನಿಜವಾದ ಮಾಲಕರು ತನ್ನ ಸ್ವಂಥ ಮನೆಯನ್ನು ಪಡೆಯುವಲ್ಲಿ ರೋಹಿತ್ ಸುವರ್ಣರ ಪ್ರಯತ್ನ ಪ್ರಶಂಸನೀಯ.
ವರದಿ :ಈಶ್ವರ ಎಂ. ಐಲ್
Comments are closed.