
ಲಕ್ನೋ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಮೂವರು ಯುವಕರು 18ರ ಹರೆಯದ ಯುವತಿಯೋರ್ವಳಿಗೆ ಬೆಂಕಿ ಹಚ್ಚಿದ ಅಮಾನುಷ ಘಟನೆ ವರದಿಯಾಗಿದೆ.
ಶೇ.40ರಷ್ಟು ಸುಟ್ಟ ಗಾಯಗಳೊಂದಿಗೆ ಕುರವಾಲಿ ಪೊಲೀಸ್ ಠಾಣೆಗೆ ಬಂದ ಯುವತಿಯು, ಮೂವರು ಆರೋಪಿ ಯುವಕರು ಕಳೆದ ಆರು ತಿಂಗಳಿಂದಲೂ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದರು; ನಿನ್ನೆ ಬುಧವಾರ ನನ್ನ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ದೂರು ನೀಡಿದ್ದಾಳೆ.
ಯುವತಿಯು ಠಾಣೆಗೆ ಬಂದು ತನ್ನ ಯಾತನೆಯನ್ನು ಹೇಳಿಕೊಂಡ ವಿಷಯವನ್ನು ಮೇಲಧಿಕಾರಿಗಳಿಗೆ ತಿಳಿಸದೆ ಕರ್ತವ್ಯ ಲೋಪ ಎಸಗಿದ ಕಾರಣಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಓರ್ವರನ್ನು ಅಮಾನತುಗೊಳಿಸಲಾಗಿದೆ.
ಸುಟ್ಟ ಗಾಯಗಳಿಗೆ ಗುರಿಯಾದ ಮಹಿಳೆಯನ್ನು ಸಾಯ್‌ಫೈ ನಲ್ಲಿನ ಯುಪಿ ಮೆಡಿಕಲ್ ಸಯನ್ಸಸ್ ಯುನಿವರ್ಸಿಟಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
-ಉದಯವಾಣಿ
Comments are closed.