ಕರಾವಳಿ

`ಜೈ ಮಾರುತಿ ಯುವಕ ಮಂಡಲ (ರಿ)’ ತುಳು ಸಿನಿಮಾಕ್ಕೆ ನಾಳೆ ಮುಹೂರ್ತ

Pinterest LinkedIn Tumblr

ಮಂಗಳೂರು, ಡಿಸೆಂಬರ್.14 : ರೀವನ್ ಸಿನಿ ಕ್ರಿಯೇಶನ್ಸ್ ಬ್ಯಾನರ್ನಡಿಯಲ್ಲಿ ತಯಾರಾಗುತ್ತಿರುವ ಚೊಚ್ಚಲ ತುಳು ಚಿತ್ರ `ಜೈ ಮಾರುತಿ ಯುವಕ ಮಂಡಲ (ರಿ)’ ಇದರ ಮುಹೂರ್ತ ಸಮಾರಂಭ ಡಿಸೆಂಬರ್ 15, 2017ನೇ ಶುಕ್ರವಾರ ಬೆಳಿಗ್ಗೆ ಗಂಟೆ 9ಕ್ಕೆ ಹಳೆಕೋಟೆ ಶ್ರೀ ಮುಖ್ಯಪ್ರಾಣ ದೇವಸ್ಥಾನ, ಬೋಳಾರ, ಮಂಗಳೂರು ಇಲ್ಲಿ ನಡೆಯಲಿದೆ ಎಂದು ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ತೊಟ್ಟಿಲು ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಹಾಗೂ ಕೋಳಿ ಕಳ್ರು ಕನ್ನಡ ಚಿತ್ರಕ್ಕೆ ನಿರ್ಮಾಪಕರಾಗಿ ಕೆಲಸಮಾಡಿದ ರಿಚರ್ಡ್ ಕಾರ್ಕಳ ಈ ಚಿತ್ರಕ್ಕೆ ನಿರ್ಮಾಪಕರಾಗಿದ್ದಾರೆ. ಚಿತ್ರದ ಚಿತ್ರೀಕರಣ ಸಸಿಹಿತ್ಲು ಬಳಿ 25 ದಿನಗಳಲ್ಲಿ ಒಂದೇ ಹಂತದಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ನಟ ಅರವಿಂದ್ ಬೋಳಾರ್ ಮಾತನಾಡಿ, ಯುವಕ ಮಂಡಲವೊಂದರಲ್ಲಿ ನಡೆಯುವ ಸನ್ನಿವೇಷಗಳನ್ನು ಈ ಚಿತ್ರದಲ್ಲಿ ಅಳವಡಿಸಲಾಗಿದ್ದು ಉತ್ತಮ ಸಂದೇಶದೊಂದಿಗೆ ಹಾಸ್ಯ ಸನ್ನಿವೇಶಗಳನ್ನು ಹೊಂದಿದೆ, ಚಿತ್ರದ ಯಶಸ್ಸಿಗೆ ಪ್ರೇಕ್ಷಕರ ಪ್ರೋತ್ಸಾಹ ಅಗತ್ಯ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಲಾಯಿತು.

ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ರಿಚರ್ಡ್ ಕಾರ್ಕಳ, ನಾಯಕ ನಟ ಸ್ವರಾಜ್ ಶೆಟ್ಟಿ, ಕ್ಯಾಮರಾಮೆನ್ ಉದಯ್ ಬಳ್ಳಾಲ್, ಸಂಗೀತ ನಿರ್ದೇಶಕ, ಕೊಳಲಗಿರಿ ಡಾಲ್ವಿನ್ ಉಪಸ್ಥಿತರಿದ್ದರು.

ರೀವನ್ ಸಿನಿ ಕ್ರಿಯೇಶನ್ಸ್‌ನ ಮೊದಲ ಚಿತ್ರ :

`ಜೈ ಮಾರುತಿ ಯುವಕ ಮಂಡಲ(ರಿ)’ ರೀವನ್ ಸಿನಿ ಕ್ರಿಯೇಶನ್ಸ್ ಬ್ಯಾನರ್ನಡಿಯಲ್ಲಿ ತಯಾರಾಗುತ್ತಿರುವ ಮೊದಲ ಚಿತ್ರ, ರಿಚರ್ಡ್ ಕಾರ್ಕಳ ಈ ಚಿತ್ರದ ನಿರ್ಮಾಪಕರಾಗಿದ್ದಾರೆ. ರಂಬಾರೂಟಿ ಹಾಗೂ ತೊಟ್ಟಿಲ್ ತುಳುಚಿತ್ರ ನಿರ್ದೇಶಕರಾದ ಪ್ರಜ್ವಲ್ ಕುಮಾರ್ ಅತ್ತಾವರ್ `ಜೈ ಮಾರುತಿ ಯುವಕ ಮಂಡಲ(ರಿ)’ ದಲ್ಲಿ ನಿರ್ದೇಶಕರಾಗಿದ್ದಾರೆ. ಇದು ಅವರನಿದೇರ್ಶನದ ಮೂರನೇ ಚಿತ್ರ. ಚಿತ್ರಕ್ಕೆ ಸಂಗೀತ ತೊಟ್ಟಿಲ್ ತುಳು ಚಿತ್ರ ಖ್ಯಾತಿಯ ಕೊಳಲಗಿರಿ ಡಾಲ್ವಿನ್. ಛಾಯಾಗ್ರಹಣ ಅಶಂ ಜಲೆ ಕಶೆ ಕೊಂಕಣಿ ಚಿತ್ರ ಮತ್ತು ಅರೆ ಮರ್ಲೆರ್ ತುಳು ಚಿತ್ರದಲ್ಲೆ ಕೆಲಸ ಮಾಡಿದ ಉದಯ್ ಬಳ್ಳಾಲ್. ಸಾಹಿತ್ಯ ಕೀರ್ತನ್ ಭಂಡಾರಿ ಯವರದು.

ತಾರಾಗಣದಲ್ಲಿ ನಾಯಕ ನಟನಾಗಿ ಸ್ವರಾಜ್ ಶೆಟ್ಟಿ, ನಾಯಕಿಯಾಗಿ ಶಿಲ್ಪಾ ಶೆಟ್ಟಿ ಹಾಗೂ ಪ್ರಮುಖ ಹಾಸ್ಯ ಪಾತ್ರಗಳಲ್ಲಿ ಅರವಿಂದ ಬೋಳಾರ್, ದೀಪಕ್ ರೈ, ಉಮೇಶ್ ಮಿಜಾರ್, ಸುನಿಲ್ ನೆಲ್ಲಿಗುಡ್ಡೆ, ಜೆ.ಪಿ ತೂಮಿನಾಡ್, ಮನೋಜ್ ಕಾರ್ಕಳ, ಪ್ರಕಾಶ್ ತೂಮಿನಾಡ್ ಹಾಗೂ ಮತ್ತಿತ್ತರರು ಅಭಿನಯಿಸಲಿದ್ದಾರೆ. ತಾಂತ್ರಿಕ ವಿಭಾಗದಲ್ಲಿ ಸಂಕಲನ ಶಂಕರ್ ನಾರಾಯಣ ಪೆರ್ಡೂರ್, ಸ್ಥಿರಚಿತ್ರ ನಿಹಾಲ್ ಪೂಜಾರಿ, ಪ್ರಚಾರ ಕಲೆ ಹಿತೇಶ್ ಆಚಾರ್ಯ, ಪಿ ಆರ್ ಓ ಶಿವಪ್ರಸಾದ್.

Comments are closed.