
ಮಂಗಳೂರು / ಮಾಣಿ, ಡಿಸೆಂಬರ್. 13: ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತ್ರತ್ವದಲ್ಲಿ ಮಂಗಳವಾರ ಬೆಳಿಗ್ಗೆ ಫರಂಗಿಪೇಟೆಯಿಂದ ಆರಂಭಗೊಂಡ “ಸಾಮರಸ್ಯ ನಡಿಗೆ”ಯ ಸಮಾರೋಪ ಸಮಾರಂಭ ಸಂಜೆ ಮಾಣಿಯಲ್ಲಿ ನಡೆಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬಹುಭಾಷಾ ನಟ ಪ್ರಕಾಶ್ ರೈ ಅವರು, ಯಾವ ಧರ್ಮವೂ ಕೊಲ್ಲಲು ಹೇಳುವುದಿಲ್ಲ. ಕೊಲ್ಲಲು ಹೇಳಿದರೆ ಅದು ಧರ್ಮವೇ ಅಲ್ಲ. ಒಂದು ಹುಲ್ಲು ಕಡ್ಡಿಯನ್ನು ಸೃಷ್ಠಿಸಲು ಸಾಧ್ಯವಾಗದ ಮನುಷ್ಯನಿಗೆ ಕೊಲ್ಲುವಷ್ಟು ಕೋಪ ಎಲ್ಲಿಂದ ಬಂತು. ಕೊಲ್ಲುವ ಸಂಸ್ಕೃತಿಯನ್ನು ಪ್ರೇರೇಪಿಸುವವರಿಂದ ದೂರ ಇರೋಣ. ಎಲ್ಲರೂ ಮನುಷ್ಯರಾಗಿ ಬಾಳೋಣ ಎಂದು ಹೇಳಿದರು.

ರಾಜಕೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರ ಪ್ರತಿಯೊಬ್ಬರ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕ ರಾಜಕೀಯ ಪ್ರಜ್ಞೆ ಬೆಳಸಿಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಈ ರಾಷ್ಟ್ರದ ಒಬ್ಬ ಕಲಾವಿದನಾಗಿ ನಿಂತಿದ್ದೇನೆ. ಕಲಾವಿದ ಪ್ರತಿಭೆಯಿಂದ ಬೆಳೆಯುವುದಿಲ್ಲ. ಸಮಾಜದ ಪ್ರೀತಿಯಿಂದ ಬೆಳೆಯುತ್ತಾನೆ. ಸಾಮರಸ್ಯಕ್ಕೆ ತೊಂದರೆಯಾದಾಗ ನಾವು ಸ್ಪಂದಿಸಬೇಕು ಎಂದರು.

ಕೋಮುಗಲಭೆ ಪ್ರಚೋದಿಸುವವರಿಂದ ದೂರ ಇರಬೇಕು. ನಮ್ಮ ಮನೆ, ಕುಟುಂಬವನ್ನು ಸ್ವಚ್ಛಗೊಳಿಸಬೇಕು. ರಾಜಸ್ಥಾನದಲ್ಲಾಗಲಿ, ಅಂಕೋಲದಲ್ಲಾಗಲಿ, ಕೋಮುಗಲಭೆಗಳ ವಿರುದ್ಧ ಇಂತಹ ಸಾಮರಸ್ಯ ನಡಿಗೆ ಅಗತ್ಯವಿದೆ ಎಂದು ಹೇಳಿದರು.

“ಸಾಮರಸ್ಯ ನಡಿಗೆ”ಯ ರೂವಾರಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಮಾತನಾಡಿ, ಸಾಮರಸ್ಯಕ್ಕೆ ಜಾತಿ-ಮತದ ಹಂಗಿಲ್ಲ ಎನ್ನುವುದನ್ನು ದ.ಕ.ಜಿಲ್ಲೆಯ ಜಾತ್ಯಾತೀತ ಪಕ್ಷಗಳು, ಸಂಘಟನೆಗಳು ತೋರಿಸಿಕೊಟ್ಟಿವೆ. ಈ ಸಾಮರಸ್ಯದ ನಡಿಗೆ ಫರಂಗಿಪೇಟೆಯಿಂದ ಮಾಣಿವರೆಗೆ ಮಾತ್ರವಲ್ಲ. ಪ್ರತಿಯೊಬ್ಬರೂ ಜೀವನ ಪರ್ಯಂತ ಒಟ್ಟಾಗಿ ನಡೆಯುವ ಸಂಕಲ್ಪ ತೊಡಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಶ್ರೀರಾಮ ರೆಡ್ಡಿ, ಸಿಪಿಐನ ರಾಜ್ಯ ಮುಖಂಡ ಡಾ.ಸಿದ್ದನಗೌಡ ಪಾಟೀಲ, ಆಹಾರ ಸಚಿವ ಯು.ಟಿ.ಖಾದರ್, ಶಾಸಕ ಅಭಯ ಚಂದ್ರಜೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಬೆಳ್ತಂಗಡಿ, ಗೇರು ನಿಗಮ ಅಧ್ಯಕ್ಷ ಬಿ.ಹೆಚ್. ಖಾದರ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮುಹಮ್ಮದ್, ಶಾಹುಲ್ ಹಮೀದ್, ಮಮತಾಗಟ್ಟಿ, ಮಂಜುಳ ಮಾವೆ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ಎ.ಸಿ.ಭಂಡಾರಿ, ರೈತ ಸಂಘದ ರವಿಕಿರಣ್ ಪುಣಚ, ತುರವೇ ಅಧ್ಯಕ್ಷ ಯೋಗಿಶ್ ಶೆಟ್ಟಿ ಜೆಪ್ಪು, ವಿವಿಧ ಪಕ್ಷದ ಪ್ರಮುಖರಾದ ಕೋಡಿಜಾಲ್ ಇಬ್ರಾಹೀಂ, ಎಂ. ದೇವದಾಸ್, ಬಾಲಕೃಷ್ಣ ಶೆಟ್ಟಿ, ವಿ.ಕುಕ್ಯಾನ್, ರಘು ಎಕ್ಕಾರ್, ಚಂದು ಎಲ್, ಯು.ಕೆ.ಕಣಚೂರು ಮೋನು, ಮುಹಮ್ಮದ್ ಕುಂಞಿ, ಯಾದವ ಶೆಟ್ಟಿ, ಸ್ಟ್ಯಾನಿ ಲೋಬೊ, ಮಿಥುನ್ ರೈ, , ಸುನಿಲ್ ಕುಮಾರ್ ಬಜಾಲ್, ಕರುಣಾಕರ, ಎ.ಸಿ ಜಯರಾಜ್, ಲತೀಫ್ ನೇರಳಕಟ್ಟೆ, ಹಿರಿಯ ವಕೀಲರುಗಳಾದ ಟಿ.ನಾರಾಯಣ ಪೂಜಾರಿ, ಯಶವಂತ ಮರೋಳಿ, ಮಾಯಿಲಪ್ಪ ಸಾಲಿಯಾನ್, ಪಿಯೂಸ್ ರೋಡ್ರಿಗಸ್, ಉಮರ್ ಫಾರೂಕ್ ಫರಂಗಿಪೇಟೆ ಮುಂತಾದವರು ವೇದಿಯಲ್ಲಿ ಉಪಸ್ಥಿತರಿದ್ದರು.

ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸ್ವಾಗತಿಸಿ ಪ್ರಸ್ತಾವಿಸಿದರು. ನೌಫಾಲ್ ಕುಡ್ತಮುಗೇರು, ಬಾಲಕೃಷ್ಣ ಆಳ್ವ ಕೋಡಾಜೆ ನಿರೂಪಿಸಿದರು. ವಕೀಲ ಬಿ.ಎಂ. ಹನೀಫ್ ವಂದಿಸಿದರು.
Comments are closed.