ಕರಾವಳಿ

ಕುಂಭಾಸಿಯಲ್ಲಿ ಜಿಂಕೆ, ಕಾಡುಕೋಣ ಕೊಂಬು ಪತ್ತೆ: ವಶಕ್ಕೆ ಪಡೆದ ಅಧಿಕಾರಿಗಳು

Pinterest LinkedIn Tumblr

ಕುಂದಾಪುರ: ಮನೆಯಲ್ಲಿ ಅಲಂಕಾರಕ್ಕೆ ಇಟ್ಟುಕೊಂಡಿದ್ದ ಎರಡು ಚಿಂಕೆ ಕೊಂಬು ಹಾಗೂ ಎರಡು ಕಾಡುಕೋಣದ ಕೊಂಬುಗಳನ್ನು ಯಾರೋ ಬಟ್ಟೆಯಲ್ಲಿ ಸುತ್ತಿ ಚೀಲದಲ್ಲಿ ಹಾಕಿ ಕುಂಭಾಶಿ ಶ್ರೀ ಅಯ್ಯಪ್ಪ ದೇವಸ್ಥಾನ ಬಳಿ ಎಸೆದು ಹೋದ ಘಟನೆ ಮಂಳವಾರ ಸಂಜೆ ನಡೆದಿದೆ.

ಕೊಂಬು ತಂದು ಬಿಸಾಕಿದ್ದು ಯಾರು, ಯಾಕಾಗಿ ಬಿಸಾಕಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಅರಣ್ಯ ಇಲಾಖೆ ವಶಕ್ಕೆ ಪಡೆದ ಕೊಂಬುಗಳ ಮೌಲ್ಯ ಸಾವಿರಾರು ರೂ.ಎಂದು ಅಂದಾಜಿಸಲಾಗಿದೆ.
ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಕುಂದಾಪುರ ಎಸ್ಸೈ ಹರೀಶ್ ಆರ್.ನಾಯ್ಕ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕೊಂಬುಗಳ ಹಸ್ತಾಂತರಿಸಿದ್ದಾರೆ.ವಂಡ್ಸೆ ವಲಯ ಅರಣ್ಯಾಧಿಕಾರಿ ಶರತ್ ಕುಮಾರ್ ಶೆಟ್ಟಿ ಕೊಂಬುಗಳ ವಶಕ್ಕೆ ಪಡೆದುಕೊಂಡಿದ್ದಾರೆ.

ಅರಣ್ಯ ಇಲಾಖೆ ವಶಕ್ಕೆ ಪಡೆದ ಕೊಂಬುಗಳ ಯಾರದ್ದೋ ಮನೆಯಲ್ಲಿ ಅಲಂಕಾರಿಕ ವಸ್ತವಾಗಿ ಬಳಕೆ ಮಾಡುಲಾಗುತ್ತಿತ್ತು ಎನ್ನುವುದಕ್ಕೆ ಕೊಂಬುಗಳಿಗೆ ಕಟ್ಟಿದ ಕದಿರು ತೆನೆ ಸಾಕ್ಷಿಯಾಗಿದೆ.

ಹಿರಿಯ ಪತ್ರಕರ್ತ ರವಿ ಬೆಳೆಗರೆ ಬಂಧನ ನಂತರ ಅವರ ಮನೆಯಲ್ಲಿ ಚಿಂಕೆ ಚರ್ಮ ಹಾಗೂ ಆಮೆ ಚಿಪ್ಪು ವಶಕ್ಕೆ ಪಡೆದು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಹೆದರಿದ ಮನೆಯರು ಕೊಂಬಗಳು ತಂದು ಎಸೆದಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.

Comments are closed.