ಅಂತರಾಷ್ಟ್ರೀಯ

ಟ್ರಂಪ್‌ ಹಳೆ ಮುತ್ತಿನ ಕಥೆ; ತಳ್ಳಿ ಹಾಕಿದ ಶ್ವೇತಭವನ

Pinterest LinkedIn Tumblr


ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಕಿರುಕುಳ ಮತ್ತು ಬಲವಂತದ ಚುಂಬನ ಆರೋಪವನ್ನು ಶ್ವೇತಭವನ ಸೋಮವಾರ ತಳ್ಳಿ ಹಾಕಿದೆ.

ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಸಾರಾ ಹುಕ್ಬೀ ಅವರು ಸುದ್ದಿಗೋಷ್ಠಿಯಲ್ಲಿ ಮಹಿಳೆಯರ ಆರೋಪವನ್ನು ತಳ್ಳಿ ಹಾಕಿದ್ದು, ‘ಟ್ರಂಪ್ ಆಡಳಿತ ಆರೋಪ ಸುಳ್ಳು ಎನ್ನುವುದಕ್ಕೆ ಪ್ರತ್ಯಕ್ಷದರ್ಶಿಗಳ ಬಹು ವರದಿಗಳನ್ನು ಹೊಂದಿದೆ. ಮಹಿಳೆಯರ ಆರೋಪ ಸಂಪೂರ್ಣ ಸುಳ್ಳಿನಿಂದ ಕೂಡಿದೆ’ ಎಂದಿದ್ದಾರೆ.

2016 ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಮೂವರು ಮಹಿಳೆಯರಾದ ಜೆಸ್ಸಿಕಾ ಲೀಡ್ಸ್‌, ಸಮಂತಾ ಹೋಲ್ವೆ ಮತ್ತು ರೆಚೇಲ್‌ ಕ್ರೂಕ್ಸ್‌ ಅವರು ‘ಟ್ರಂಪ್‌ ನಮಗೆ ಬಲವಂತವಾಗಿ ಚುಂಬಿಸಿ ಲೈಂಗಿಕ ಕಿರುಕುಳ ನೀಡಿದ್ದರು’ ಎಂದು ಆರೋಪಿಸಿದ್ದರು.

ಮೂವರ ಪೈಕಿ ಜೆಸ್ಸಿಕಾ ಅವರು ‘1970 ರಲ್ಲಿ ನನ್ನ ಮೇಲೆ ಟ್ರಂಪ್‌ರಿಂದ ಲೈಂಗಿಕ ಕಿರುಕುಳ ನಡೆದಿತ್ತು’ ಎಂದು ಆರೋಪಿಸಿದ್ದರು. ಈ ವಿಚಾರ ಸಾಮಾಜಿಕ ತಾಣಗಳಲ್ಲಿ ವಿಶ್ವಾದ್ಯಂತ ವೈರಲ್‌ ಆಗಿತ್ತು.

ಈ ವಿಚಾರವನ್ನು ಮುಂದಿಟ್ಟುಕೊಂಡು ” #MeToo” ಎಂಬ ಹ್ಯಾಶ್‌ಟ್ಯಾಗ್‌ ವಿಶ್ವಾದ್ಯಂತ ವೈರಲ್‌ ಆಗಿ ಮಹಿಳೆಯರಿಗೆ ತಮ್ಮ ಮೇಲಾದ ದೌರ್ಜನ್ಯವನ್ನು ಹೊರಹಾಕಲು ವೇದಿಕಯೂ ನಿರ್ಮಾಣವಾಗಿತ್ತು.

-ಉದಯವಾಣಿ

Comments are closed.