ಕರ್ನಾಟಕ

ಗಣೇಶಪೇಟೆ ಪಾಕಿಸ್ತಾನದಂತೆ ಕಾಣುತ್ತದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿ ಬಂಧನ

Pinterest LinkedIn Tumblr

ಹುಬ್ಬಳ್ಳಿ: ಗಣೇಶಪೇಟೆ ಪಾಕಿಸ್ತಾನದಂತೆ ಕಾಣುತ್ತದೆ ಎಂದು ಹೇಳಿಕೆ ನೀಡಿದ್ದ ಮೌಲ್ವಿ ಮುತವಲ್ಲಿ ಅಬ್ದುಲ್‌ ಹಮೀದ್‌ ಖೈರಾತಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಈದ್‌ ಮಿಲಾದ್‌ ಆಚರಣೆಯ ಸಂದರ್ಭದಲ್ಲಿ ಅಬ್ದುಲ್ ಹಮೀದ್ ಖೈರಾತಿ, ಹುಬ್ಬಳ್ಳಿಯ ಗಣೇಶ್ ಪೇಟೆ ಪಾಕಿಸ್ತಾನದ ಹಾಗೇ ಕಾಣುತ್ತಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಮೌಲ್ವಿವಿರುದ್ಧ ಶರಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಾಂತಿ ಭಂಗ ಮತ್ತು ಪ್ರಚೋದನಾತ್ಮಕ ಪ್ರಕರಣ 153 ರಡಿ ಪ್ರಕರಣ ದಾಖಲಾಗಿತ್ತು.

ಬುಧವಾರ ರಾತ್ರಿ ಆರೋಪಿಯನ್ನು ಬಂಧಿಸಿದ ಪೋಲಿಸರು ಕಿಮ್ಸ್ ನಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದರು. ಅಲ್ಲಿಂದ ಅಮರಗೋಳದಲ್ಲಿರುವ ಜೆಎಂ ಎಫ್ ಸಿ ನಾಲ್ಕನೇ ಕೋರ್ಟ್‌ ನ್ಯಾಯಾಧೀಶೆ ದೀಪ್ತಿ ನಾಡಗೌಡ ಅವರ ನಿವಾಸದಲ್ಲಿ ಆರೋಪಿಯನ್ನು ಹಾಜರು ಪಡಿಸಲಾಯಿತು.

Comments are closed.