ರಾಷ್ಟ್ರೀಯ

ಹಾರ್ದಿಕ್ ‘ರಾಸಲೀಲೆ’ ಮತ್ತೊಂದು ಸಿಡಿ ಬಿಡುಗಡೆ

Pinterest LinkedIn Tumblr

ಅಹ್ಮದಾಬಾದ್: ಪಾಟೀದಾರ್ ಮೀಸಲು ಹೋರಾಟಗಾರ ಹಾರ್ದಿಕ್ ಪಟೇಲ್ ಅವರದ್ದು ಎನ್ನುವ ಮತ್ತೊಂದು ರಾಸಲೀಲೆ ಸಿಡಿ ಬಿಡುಗಡೆಯಾಗಿದ್ದು, ಗುಜರಾತ್ ಚುನಾವಣೆ ಕಾವು ಮತ್ತಷ್ಟು ಹೆಚ್ಚುತ್ತಲೇ ಇದೆ. ಆ ಮೂಲಕ ಬಿಜೆಪಿ ಮತ್ತು ಪಾಟೀದಾರ್ ಆಂದೋಲನ್ ಸಮಿತಿ ನಡುವಿನ ವಾಗ್ಯುದ್ಧ ತಾರಕಕ್ಕೇರಿದೆ.

ಮೀಸಲಾತಿ ಹೋರಾಟಗಾರನ ವಿರುದ್ಧ ಬಿಜೆಪಿ ಬಿಡುಗಡೆ ಮಾಡುತ್ತಿರುವ ಮೂರನೇ ಸಿಡಿಯಾಗಿದ್ದು, ವೈರಲ್ ಆಗಿದೆ. ಕಳೆದ ತಿಂಗಳು ಎರಡು ಬಾರಿ ಬಿಡುಗಡೆ ಮಾಡಿದ್ದ ಸಿಡಿಗಳು ಸಹ ವೈರಲ್ ಆಗಿದ್ದವು. ಆಗಲೇ, ಮಾನಹರಣ ಮಾಡುವ ಉದ್ದೇಶದಿಂದ ಮತ್ತಷ್ಟು ಸಿಡಿಗಳು ಬಿಡುಗಡೆಯಾಗಲಿವೆ, ಎಂದುಲ ಹಾರ್ದಿಕ್ ಹೇಳಿದ್ದರು.

ಇದೀಗ ಬಿಡುಗಡೆಯಾದ ಸಿಡಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು, ಹಾರ್ದಿಕ್ ಇನ್ನೂ ಮಾಧ್ಯಮಗಳಿಗೆ ಸಿಕ್ಕಿಲ್ಲ. ಈ ಮೊದಲು ಬಿಡುಗಡೆ ಮಾಡಿದ ಸಿಡಿಯ ಮುಂದುವರಿದ ಭಾಗದಂತೆ ಈ ಸಿಡಿ ಇದ್ದು, ಹಾರ್ದಿಕ್ ಹಾಗೂ ಇನ್ನಿಬ್ಬರು ಯುವತಿಯೊಂದಿಗೆ ಕೊಠಡಿಯೊಂದರಲ್ಲಿ ಇರುವುದು ಕಾಣುತ್ತದೆ. ಯುವತಿಯೊಂದಿಗೆ ಹಾರ್ದಿಕ್‌ನನ್ನು ರೂಂಮಿನ ಲೈಟ್ ಆರಿಸಿ, ಯುವಕರು ಹೊರ ಹೋಗಿದ್ದು, ನಂತರದ ದೃಶ್ಯಗಳು ಸಿಡಿಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿಲ್ಲ.

ಬಿಜೆಪಿ ಮಾಡುತ್ತಿರುವ ‘ಚಾರಿತ್ರ್ಯವಧೆ’ ಪಾಟೀದಾರ್‌ ಸಮುದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಎಂದು ಸಮಿತಿಯ ದಿನೇಶ್ ಬಂಭಾನೀಯಾ ಹೇಳಿದ್ದಾರೆ.

Comments are closed.