
ಅಮೆರಿಕದ ರೆಸ್ಟೋರೆಂಟ್‌ನಲ್ಲಿ ದಕ್ಷಿಣ ಭಾರತ ಮೇರು ನಟರ ಭಾವಚಿತ್ರಗಳು! ಹೌದು ನಟ ಜಗ್ಗೇಶ್ ಅವರು ಹೊಟ್ಟೆ ತುಂಬಿಸಲು ಅಮೆರಿಕದ ಹೋಟೆಲ್‌ವೊಂದಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಹೊಟ್ಟೆಯ ಜತೆಗೆ ಮನವೂ ತುಂಬಿ ಬಂದ ಘಟನೆಯ ಕುರಿತು ಟ್ವಿಟರ್‌ನಲ್ಲಿ ಹೇಳಿಕೊಂಡಿದ್ದಾರೆ.
ಭಾರತೀಯ ಚಿತ್ರರಂಗದಲ್ಲಿ ಮೇರು ನಟರಾಗಿ ಮೆರೆದ ಕನ್ನಡದ ಡಾ. ರಾಜ್ ಕುಮಾರ್, ತೆಲುಗಿನ ಎಸ್ ವಿ ರಂಗರಾವ್, ಎನ್‌ಟಿಆರ್ ಮಲಯಾಳಂನ ಪ್ರೇಮ್ ನಜೀರ್ ತಮಿಳಿನ ಶಿವಾಜಿ ಗಣೇಶನ್, ಫೋಟೊಗಳನ್ನು ನೋಡುತ್ತಿದ್ದರೆ ಇಲ್ಲಿಗೆ ಭೇಟಿಕೊಟ್ಟ ಭಾರತೀಯನಿಗೆ ಮತ್ತಷ್ಟು ಹೆಮ್ಮೆ ಎನಿಸುವುದು.
Comments are closed.