ರಾಷ್ಟ್ರೀಯ

ಮುಸ್ಲಿಮರು ಶ್ರೀರಾಮನ ಮಕ್ಕಳು, ಬಾಬರ್ ನ ಮಕ್ಕಳಲ್ಲ; ಸಚಿವ ಗಿರಿರಾಜ್

Pinterest LinkedIn Tumblr


ನವದೆಹಲಿ: ಭಾರತದಲ್ಲಿ ವಾಸಿಸುವ ಮುಸ್ಲಿಮರು ಶ್ರೀರಾಮನ ಮಕ್ಕಳೇ ಹೊರತು ಬಾಬರ್ ನ ಮಕ್ಕಳಲ್ಲ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಿಯೇ ಸಿದ್ಧ ಎಂದು ಸದಾ ವಿವಾದಿತ ಹೇಳಿಕೆ ಮೂಲಕ ಗುರುತಿಸಿಕೊಂಡಿರುವ ಕೇಂದ್ರ ಸಚಿವ, ಸಂಸದ ಗಿರಿರಾಜ್ ಸಿಂಗ್ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಮುಸ್ಲಿಮ್ ಸಹೋದರರು ಸಹಕರಿಸಬೇಕು. ಅವರ ಮತ್ತು ಪೂರ್ವಜರು ಹಿಂದುಗಳಾಗಿದ್ದರು..ಹೀಗಾಗಿ ಒಟ್ಟಾಗಿ ಸಹಕರಿಸುವ ಮೂಲಕ ಮಂದಿರ ಕಟ್ಟಿದರೆ ಯಾವುದೇ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಒಂದು ವೇಳೆ ಕೋಟ್ಯಂತರ ಜನರ ನಂಬಿಕೆಯ ಸಂಕೇತವಾಗಿರುವ ಭಗವಾನ್ ರಾಮನ ಮಂದಿರವನ್ನು ಭಾರತದಲ್ಲಿ ಕಟ್ಟಲು ಸಾಧ್ಯವಾಗೋದಿಲ್ಲ ಎಂದಾದರೆ ಪಾಕಿಸ್ತಾನದಲ್ಲಿ ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಈ ಸಂದರ್ಭದಲ್ಲಿ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಸಿನಿಮಾದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದರು.

ಚಿತ್ರ ನಿರ್ಮಾಪಕರು ಯಾಕೆ ಪದೇ, ಪದೇ ಹಿಂದೂ ಸಮುದಾಯವನ್ನೇ ಗುರಿಯಾಗಿರಿಸಿಕೊಳ್ಳುತ್ತಾರೆ. ಯಾಕೆ ಕೋಟ್ಯಂತರ ಜನರ ಭಾವನೆಗೆ ಧಕ್ಕೆ ತರುತ್ತಾರ? ಹಾಗಾದರೆ ಇವರು ಬೇರೆ ಯಾವುದೇ ಧರ್ಮದ ಸಿನಿಮಾ ಮಾಡುವ ಧೈರ್ಯ ತೋರುತ್ತಾರೆಯೇ? ಹಿಂದುಗಳು ತುಂಬಾ ಉದಾರವಾದಿಗಳು, ಅದಕ್ಕಾಗಿ ಪ್ರತಿಯೊಬ್ಬರು ಹಿಂದು ಸಮುದಾಯವನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

-ಉದಯವಾಣಿ

Comments are closed.