ಕರ್ನಾಟಕ

ಮೋದಿ ತನ್ನ ‘ಮನ್‌ ಕೀ ಬಾತ್‌’ನಲ್ಲಿ ಕರ್ನಾಟಕದ ಈ ಬಾಲಕಿಯ ಹೆಸರು ಪ್ರಸ್ತಾಪ ಮಾಡಿದ್ದೇಕೆ…?

Pinterest LinkedIn Tumblr

ಲಕ್ಷ್ಮೇಶ್ವರ (ಗದಗ ಜಿಲ್ಲೆ): ಪ್ರಧಾನಿ ನರೇಂದ್ರ ಮೋದಿ, ಭಾನುವಾರದ ‘ಮನ್‌ ಕೀ ಬಾತ್‌’ ರೇಡಿಯೊ ಕಾರ್ಯಕ್ರಮದಲ್ಲಿ ಲಕ್ಷ್ಮೇಶ್ವರದ ಆಕ್ಸ್‌ಫರ್ಡ್‌ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ರೀದಾ ನದಾಫ ಹೆಸರನ್ನು ಪ್ರಸ್ತಾಪಿಸಿದರು.

ನ.12 ರಂದು ಪ್ರಧಾನಿಗೆ ಪತ್ರ ಬರೆದಿದ್ದ ರೀದಾ, ‘ಮೋದೀಜಿ ನೀವೆಂದರೆ ನನಗಿಷ್ಟ. ನೀವು ಮಾಡುತ್ತಿರುವ ದೇಶ ಸೇವೆ ನನಗೆ ಖುಷಿ ತಂದಿದೆ. ನಾನು ನಿಮ್ಮನ್ನು ನೋಡಲು ಬಯಸುತ್ತೇನೆ’ ಎಂದಿದ್ದಳು. ಈ ಪತ್ರವು ಮೋದಿ ಅವರ ಗಮನ ಸೆಳೆದಿದ್ದು, ಇದನ್ನು ಅವರು ತಮ್ಮ ಮನದ ಮಾತಿನಲ್ಲಿ ಉಲ್ಲೇಖಿಸಿದ್ದಾರೆ.

‘ಮಗಳ ಹೆಸರನ್ನು ಪ್ರಸ್ತಾಪಿಸಿ ಪ್ರಧಾನಿ ಭಾಷಣ ಮಾಡಿರುವುದು ಶಾಲೆಯ ಶಿಕ್ಷಕರು, ಆಡಳಿತ ಮಂಡಳಿ ಹಾಗೂ ಪಟ್ಟಣದ ಜನತೆಗೆ ತುಂಬಾ ಸಂತೋಷ ತಂದಿದೆ’ ಎಂದು ಬಾಲಕಿಯ ತಂದೆ ಅಲ್ಲಾಭಕ್ಷಿ ನದಾಫ ಹೇಳಿದರು.
‘ಮೋದಿ ಕಾರ್ಯವೈಖರಿ ನನಗೆ ಇಷ್ಟವಾಗಿದೆ. ಆದ್ದರಿಂದ ನಾನು ಅವರಿಗೆ ಪತ್ರ ಬರೆದಿದ್ದೆ’ ಎಂದು ವಿದ್ಯಾರ್ಥಿನಿ ರೀದಾ ನದಾಫ ಖುಷಿ ಹಂಚಿಕೊಂಡಳು.

Comments are closed.