ಫೇಸ್ ಬುಕ್…ಸ್ಮಾರ್ಟ್ ಫೋನ್ ಹೊಂದಿರುವ ಪ್ರತಿಯೊಬ್ಬರ ಬಾಯಲ್ಲೂ ಕೇಳಿಬರುತ್ತಿರುವ ಮಾತು. ಯಾವುದೇ ಸಮಯದಲ್ಲಾಗಲೀ, ಎಂತಹ ಸಂದರ್ಭದಲ್ಲಾಗಲೀ, ಫೋಟೋ ಅಥವಾ ವಿಡಿಯೋ ತೆಗೆಯುವುದು, ಅಥವಾ ಸಂದೇಶವನ್ನಾಗಲೀ, ನಮಗೆ ತಿಳಿದ ವಿಷಯವನ್ನಾಗಲೀ, ಷೇರ್ ಮಾಡುವುದು, ಲೈಕ್ಸ್, ಕಾಮೆಂಟ್ಸ್ ಪಡೆದುಕೊಳ್ಳುವುದು, ಇಷ್ಟವಾದಲ್ಲಿ ಷೇರ್ ಮಾಡುವಂತಹ ವಿಧಾನ ತುಂಬಾ ಬೆಳೆದಿದೆ. ಇನ್ನು ವ್ಯಾಪಾರ ಸಂಸ್ಥೆಗಳು ಫೇಸ್ ಬುಕ್ ಮಾಧ್ಯಮದ ಮೂಲಕ ತಮ್ಮ ವ್ಯಾಪಾರದ ಪ್ರಚಾರ ಕಾರ್ಯಕ್ರಮಗಳನ್ನು ವಿಪರೀತವಾಗಿ ನಿರ್ವಹಿಸುತ್ತಿವೆ.
ಯಾರದೇ ಫೇಸ್ ಬುಕ್ ಖಾತೆಯಾಗಿರಲಿ ಅದರಲ್ಲಿ ಫ್ರೆಂಡ್ ರಿಕ್ವೆಸ್ಟ್, ಮೆಸೇಜ್, ಪೋಸ್ಟ್ ಎಂಬ ಮೂರು ವಿಧವಾದ ನೋಟಿಫಿಕೇಷನ್ಸ್ ಗಳನ್ನು ಕಾಣಬಹುದು. ಆದರೆ ಯಾವುದೇ ನೋಟಿಫಿಕೇಷನ್ ಬಂದರೂ ಚಿಕ್ಕದಾದ ಗ್ಲೋಬ್ ಆಕಾರದ ಮೇಲೆ ಅವುಗಳ ಸಂಖ್ಯೆ ಗೋಚರಿಸುತ್ತದೆ. ಆದರೆ ಅದರಲ್ಲಿ ಅಡಗಿರುವ ಒಂದು ವಿಷಯವನ್ನು ಗಮನಿಸಿದ್ದರಾ? ಇಲ್ಲವೆ? ಇಲ್ಲದಿದ್ದಲ್ಲಿ ಅವು ಏನೆಂದು ತಿಳಿದುಕೊಳ್ಳಿ…!
ಸಾಮಾನ್ಯವಾಗಿ ನಮಗೆ ಫ್ರೆಂಡ್ ರಿಕ್ವೆಸ್ಟ್, ಮೆಸೇಜ್, ಪೋಸ್ಟ್ ಗಳಿಗೆ ಸಂಬಂಧಿಸಿದ ನೋಟಿಫಿಕೇಷನ್ ಗಳು ಬರುತ್ತವೆ. ಅವು ಗ್ಲೋಬ್ ಆಕಾರದ ಮೇಲೆ ಯಾವುದಾದರೂ ಸಂಖ್ಯೆಯಲ್ಲಿ ಕಾಣುತ್ತವೆ. ಆದರೆ ಆ ಗ್ಲೋಬ್ ಅನ್ನು ಜಾಗ್ರತೆಯಿಂದ ಗಮನಿಸಿದಲ್ಲಿ ಒಂದು ವಿಷಯ ತಿಳಿಯುತ್ತದೆ. ಅದೇನೆಂದರೆ ನಾವು ಏಷ್ಯ ಖಂಡಕ್ಕೆ ಸೇರಿದವರಾದ್ದರಿಂದ ನೋಟಿಫಿಕೇಷನ್ ಕೆಳಗಿರುವ ಗ್ಲೋಬ್ ಏಷ್ಯ ಖಂಡಕ್ಕೆ ಸೇರಿದ ದೇಶಗಳನ್ನು ಸೂಚಿಸುತ್ತದೆ.
ಹಾಗೆಯೇ ನಾವು ಅಮೆರಿಕಾ ಅಥವಾ ಯೂರೋಪ್ ನಲ್ಲಿ ಇದ್ದ ಪಕ್ಷದಲ್ಲಿ ಆ ಖಂಡಗಳಿಗೆ ಸೇರಿದ ದೇಶಗಳನ್ನು ತೋರಿಸುತ್ತಾ ಗ್ಲೋಬ್ ಚಲಿಸುವುದನ್ನು ಗಮನಿಸಿದ್ದೀರಾ! ಪ್ರತಿನಿತ್ಯ ಫೇಸ್ ಬುಕ್ ಅನ್ನು ನೋಡುವಾಗ ಗ್ಲೋಬ್ ಅನ್ನು ಗಮನಿಸಿರುತ್ತೀರಿ. ಆದರೆ ಈ ವಿಷಯದ ಬಗ್ಗೆ ನಿಮಗೆ ತಿಳಿದಿರುವುದಿಲ್ಲ. ಈಗ ತಿಳಿಯಿತಲ್ಲವೆ?


Comments are closed.