
ಬೆಂಗಳೂರು: ಲಿಂಗಾಯತ ಪ್ರತ್ಯೇಕ ಧರ್ಮವನ್ನಾಗಿಸಿ ಸಂವಿಧಾನಿಕ ಮಾನ್ಯತೆ ನೀಡಬೇಕೆಂದು ಹೋರಾಟ ತೀವ್ರಗೊಂಡಿದ್ದು, ರಾಜ್ಯ ಸರ್ಕಾರಕ್ಕೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಡಿ.30 ರ ಗಡುವು ನೀಡಲಾಗಿದೆ.
ಭಾನುವಾರ ಬಸವನ ಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ ನಡೆಸಿ ಸರ್ಕಾರಕ್ಕೆ ಗಡುವು ನೀಡಲಾಗಿದೆ.
ಸಮಾವೇಶದಲ್ಲಿ ಪ್ರಧಾನ ಭಾಷಣ ಮಾಡಿದ ಮಾತೆ ಮಹಾದೇವಿ ಸರ್ಕಾರಕ್ಕೆ ಗಡುವು ನೀಡಿದರು.
ಈ ವೇಳೆ ಸರ್ಕಾರದ ಎದುರು 5 ಬೇಡಿಕೆ ಗಳನ್ನು ಮುಂದಿಡಲಾಗಿದ್ದು, ಅವುಗಳೆಂದರೆ , ”ಡಿಸೆಂಬರ್ 30 ರ ಒಳಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. 2.ಗುಲಬರ್ಗಾ ವಿವಿಗೆ ಬರವಣ್ಣನ ಹೆಸರಿಡಬೇಕು,3. ವಿಧಾನಸಭೆ ಚುನಾವಣೆ ಮುನ್ನ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಘೋಷಿಸಬೇಕು. 4.ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಿಸಿ, 5.ಕೂಡಲೇ ಜಾತಿ ಪ್ರಮಾಣ ಪತ್ರಗಳಲ್ಲಿ ವೀರಶೈವ ಲಿಂಗಾಯತ ಎನ್ನುವುದನ್ನು ರದ್ದುಪಡಿಸಿ” ಎಂದು ಬೇಡಿಕೆ ಗಳನ್ನು ಮುಂದಿಡಲಾಗಿದೆ.
-ಉದಯವಾಣಿ
Comments are closed.