
ಹೊಸದಿಲ್ಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ‘ಪದ್ಮಾವತಿ’ ಚಿತ್ರ ಬಿಡುಗಡೆ ವಿರುದ್ಧ ಕಿಡಿಕಾರಿರುವ ರಜಪೂತ ಸಮುದಾಯ ಇತ್ತೀಚೆಗೆ ನಡೆದ ಟೈಮ್ಸ್ ನೌ ಚರ್ಚೆಯಲ್ಲಿ ಕತ್ತಿ ತೋರಿಸಿದ ಘಟನೆ ನಡೆದಿದೆ.
ರಾಣಿ ಪದ್ಮಾವತಿಗೆ ಅವಹೇಳನ ಮಾಡಲಾಗಿದೆ ಎಂದು ಹೇಳಿಕೊಂಡಿರುವ ರಜಪೂತ ಸಮದಾಯದವರು ಇತ್ತೀಚೆಗೆ ಚಿತ್ರ ಬಿಡುಗಡೆ ಮಾಡದಂತೆ ಆಗ್ರಹಿಸಿದ್ದರು. ಅಲ್ಲದೇ ಹಲವೆಡೆ ಬನ್ಸಾಲಿ ಮತ್ತು ಚಿತ್ರ ತಂಡದ ವಿರುದ್ಧ ಪ್ರತಿಭಟನೆ ಕೂಡಾ ನಡೆಸಿದ್ದರು.
ಹೀಗಾಗಿ ‘ಟೈಮ್ಸ್ ನೌ’ ನ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಕರ್ಣಿ ಸೇನಾ ಮುಖಂಡನೊಬ್ಬ ಬಹಿರಂಗವಾಗಿಯೇ ಖಡ್ಗ ತೋರಿಸಿದ್ದು ನಿರೂಪಕರಿಗೆ ಬೆದರಿಸಲು ಮುಂದಾಗಿದ್ದಾರೆ. ಖಿಲ್ಜಿ ಮತ್ತು ಪದ್ಮಾವತಿ ಇತಿಹಾಸ ಹೇಳುವಂತೆ ನಿರೂಪಕ ಆಗ್ರಹಿಸಿದ ವೇಳೆ ಕಾರ್ಯಕ್ರಮಕ್ಕೆ ಬಂದಿದ್ದ ಇಬ್ಬರೂ ತಡಬಡಾಯಿಸಿದ್ದರು.
ಬಳಿಕ ಓರ್ವ ಮುಖಂಡ ನೇರವಾಗಿ ಟೈಮ್ಸ್ ನೌನ ಹಿರಿಯ ಸಂಪಾದಕ ಆನಂದ್ ನರಸಿಂಹನ್ಗೆ ಖಡ್ಗ ತೋರಿಸಿದ್ದಾನೆ. ಬಳಿಕ ಈ ಖಡ್ಗ ರಜಪೂತರ ಹೆಮ್ಮೆ ಎಂದು ಹೇಳಿದ್ದಾನೆ.
ಇತ್ತೀಚೆಗೆ ರಜಪೂತರ ಮುಖಂಡನೊಬ್ಬ‘ಪದ್ಮಾವತಿ’ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಲೆ ತಂದು ಕೊಟ್ಟವರಿಗೆ ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದ. ಅಲ್ಲದೇ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾಳ ಮೂಗನ್ನು ಕತ್ತರಿಸುವುದಾಗಿ ಕೂಡಾ ಬೆದರಿಕೆಯೊಡ್ಡಲಾಗಿತ್ತು.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ಬಹಿರಂಗವಾಗಿಯೇ ಗೂಂಡಾ ವರ್ತನೆ ತೋರಿರುವ ಕರ್ಣಿ ಸೇನಾ ನಾಯಕರ ವಿರುದ್ಧ ಸಾರ್ವಜನಿಕರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Comments are closed.