ಕರಾವಳಿ

ಡಿಸೆಂಬರ್,25 -28 : ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಬ್ರಹ್ಮಕಲಶೋತ್ಸವ : ಆಮಂತ್ರಣ ಪತ್ರಿಕೆ ಬಿಡುಗಡೆ

Pinterest LinkedIn Tumblr

ಮಂಗಳೂರು, ನವೆಂಬರ್.16 : ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಕ್ಷೇತ್ರದಲ್ಲಿ ತಾರೀಕು 25.12.2017ರಿಂದ ತಾ.28.12.2017ರವರೆಗೆ ನಡೆಯುವ ಬ್ರಹ್ಮಕಲಶೋತ್ಸವ ಹಾಗೂ ಕ್ಷೇತ್ರದ ಉತ್ತರ ದಿಕ್ಕಿನ ಪೌಳಿಯ ಉದ್ಘಾಟನೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕ್ಷೇತ್ರದ ಅಧ್ಯಕ್ಷರಾದ ಶ್ರೀ ಕೆ ಚಿತ್ತರಂಜನ್ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಶ್ರೀಕ್ಷೇತ್ರದಲ್ಲಿ ನಡೆಯಿತು.

ನಗರದ ಖ್ಯಾತ ಉದ್ಯಮಿ ಶ್ರೀದೇವಿ ವಿದ್ಯಾಸಂಸ್ಥೆಗಳ ಅಧ್ಯಕ್ಷರಾಗಿರುವ ಶ್ರೀ ಸದಾನಂದ ಶೆಟ್ಟಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಅನೇಕ ಕಾರಣಿಕ ಕ್ಷೇತ್ರಗಳಲ್ಲಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರಕ್ಕೆ ಯಾವಾಗಲೂ ಅಗ್ರಸ್ಥಾನ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತಾಭಿಮಾನಿಗಳು ಕೇವಲ ಈ ಊರಿನಿಂದ ಅಲ್ಲದೆ ಪರ ಊರಿನಿಂದಲೂ ಬಂದು ತಮ್ಮ ಇಷ್ಟಾರ್ಥವನ್ನು ನೆರವೇರಿಸಿ ಕೊಳ್ಳುತ್ತಾರೆ. ಇಂಥ ಪುಣ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ ಈ ಕ್ಷೇತ್ರವು ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಕಾಣುವಂತಾಗಲಿ ಶ್ರೀ ಕ್ಷೇತ್ರದ ದೇವರ ಆಶೀರ್ವಾದ ಸದಾ ನಮಗೆಲ್ಲರಿಗೂ ಇರಲಿ ಎಂದು ಹೇಳಿದರು.

ಸಮಾರಂಭದಲ್ಲಿ ಹಾಜರಿದ್ದ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರುಗಳಾದ ಶ್ರೀಯುತ ಪ್ರವೀಣ್ ಚಂದ್ರ ಆಳ್ವ ಶ್ರೀಯುತ ಕೇಶವ ಮರೋಳಿ, ಶ್ರೀಯುತ ವಿಜಯ್ ಕುಮಾರ್ ಶೆಟ್ಟಿ ಶ್ರೀಯುತ ಸುಧೀರ್ ಕುಮಾರ್ ಶೆಟ್ಟಿ ಮೊದಲಾದವರು ಸಂದರ್ಭೋಚಿತವಾಗಿ ಮಾತನಾಡಿದರು.

ಸಮಾರಂಭದಲ್ಲಿ ಕ್ಷೇತ್ರದ ಮೊಕ್ತೇಸರುಗಳಾದ ಬಿ ದಾಮೋದರ ನಿಸರ್ಗ, ಜೆ ಸುರೇಂದ್ರನಾಥ್ . ಬಿ ವಿಠ್ಠಲ ವಾಮನ ಅಳಪೆ, ಶ್ರೀಯುತ ಜೆ ಕೇಶವ ಅಂಗಡಿ ಮಾರ. ಕ್ಷೇತ್ರದ ಮ್ಯಾನೇಜರ್ ಕಿಶೋರ್ ಕುಮಾರ್ ಮಜಿಲ. ಜಗದೀಪ್ .ಡಿ ಸುವರ್ಣ. ದಿವರಾಜ್ ಮೊದಲಾದವರು ಉಪಸ್ಥಿತರಿದ್ದರು. ಶ್ರೀಯುತ. ಜೆ ದಿನೇಶ್ ಅಂಚನ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.

Comments are closed.