ಇತ್ತೀಚೆಗೆ ಸಾಮಾಜಿಕ ತಾಣದಲ್ಲಿ, ಕ್ರಿಕೆಟ್ ಇತಿಹಾಸದ ವಿಚಿತ್ರ ಔಟ್ ಎಂಬ ಒಕ್ಕಣೆಯೊಂದಿಗೆ ವಿಡಿಯೋ ಒಂದು ಕಾಡ್ಗಿಚ್ಚಿನಂತೆ ಹರಿದಾಡುತ್ತಿದೆ. ಈ ವಿಡಿಯೋ ನೋಡಿದವರು ಆಶ್ಚರ್ಯಚಕಿತರಾಗುತ್ತಿದ್ದಾರೆ.
ಏಕೆಂದರೆ ಇದರಲ್ಲಿ ಓರ್ವ ಔಲರ್ ಮಾಡಿಡ ಬಾಲ್ ಬ್ಯಾಟ್ಸ್ ಮನ ಬ್ಯಾಟ್ ಗೆ ತಾಗುವುದು ಬಿಡಿ , ಸುಮಾರು ಒಂದು ಅಡಿ ದೂರದಿಂದ ಸಾಗುವುದು ಕಾಣುತ್ತಿದೆ. ಅಲ್ಲದೆ ಯಾವುದೇ ಫೀಲ್ಡರ್ ಕೂಡಾ ಔಟ್ ಗಾಗಿ ಮನವಿ ಮನವಿ ಮಾಡಿರಲ್ಲಿ. ಅದಾಗ್ಯೂ ಅಂಪೈರ್ ಔಟ್ ನೀಡುತ್ತಾನೆ ಎಂಬುದು ಒಂದು ಆಶ್ಚರ್ಯವೆಂದಾದರೆ, ಆ ಔಟ್ ತೀರ್ಪಿಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸದೆ, ಮೊದಲೇ ಮೈದಾನ ಬಿಟ್ಟು ಹೋಗಲು ರೆಡಿಯಾಗಿದ್ದಂತೆ ಕಂಡು ಬರುವ ಬ್ಯಾಟ್ಸ್ ಮನ್ ನ ವರ್ತನೆ ಇನ್ನಷ್ಟು ಆಶ್ಚರ್ಯಕ್ಕೀಡು ಮಾಡುತ್ತದೆ.
ಪಾಕಿಸ್ತಾನದ ಹಿರಿಯ ಕ್ರೀಡಾ ವರದಿಗಾರರ ಪ್ರಕಾರ, ಈ ಪಂದ್ಯವು 15 ಎಪ್ರಿಲ್ 2007 ರಲ್ಲಿ Surrey vs Leeds/Bradford UCCE ನಡುವೆ ಇಂಗ್ಲಂಡಿನ ಓವಲ್ ಮೈದಾನದಲ್ಲಿ ನಡೆದ ಕೌಂಟಿ ಪಂದ್ಯವಾಗಿತ್ತು. ಆ ಬೌಲರ್ ಮೊಹಮ್ಮದ್ ಅಕ್ರಂ ಆಗಿದ್ದರೆ ಬ್ಯಾಟ್ಸ್ ಮನ್ ಟಾಮ್ ಮೆರಿಲಿಹಾತ್ ಹಾಗೂ ವಿಕೆಟ್ ಕೀಪರ್ ಜಾನ್ ಬೆಟ್ಟಿ. ಆ ಅಂಪೈರ್ ಇಯಾನ್ ಗೌಲ್ಡ್ ಆಗಿದ್ದರು.
ಅಲ್ಲಿ ನಡೆದದ್ದೇನೆಂದರೆ, ಅದು ಆ ಓವರ್ ನ ಮೊದಲ ಎಸೆತವಾಗಿತ್ತು. ಆದರ ಮೊದಲಿನ ಓವರ್ ನ ಕೊನೆಯ ಎಸೆತದಲ್ಲಿ ಬ್ಯಾಟ್ಸ್ ಮನ್ ವಿಕೆಟ್ ಗೆ ಹೊಡೆದು ಹಿಟ್ ವಿಕೆಟ್ ಆಗಿದ್ದ. ಆದರೆ ಅದೇ ಸಮಯಕ್ಕೆ ಅಂಪೈರ್ ಓವರ್ ಎಂದೂ ಕೂಡಾ ಕೂಗಿದ್ದರು. ಹಾಗಾಗಿ ಫಾರ್ಮಾಲಿಟೀಸ್ ಗಾಗಿ ಮುಂದಿನ ಓವರ್ ನ ಪ್ರಥಮ ಬಾಲನ್ನು ಆ ಬ್ಯಾಟ್ಸ್ ಮನ್ ಆಡಿ ಔಟ್ ನೀಡಲಾಗುವುದು ಎಂದು ಅಂಪೈರ್, ಬ್ಯಾಟ್ಸ್ ಮನ್ ಹಾಗೂ ವಿರುದ್ಧ ತಂಡದ ನಾಯಕರ ನಡುವೆ ಒಪ್ಪಂದವಾಗಿತ್ತು. ಈ ಕಾರಣಕ್ಕಾಗಿ ಬ್ಯಾಟಿಗೆ ತಾಗದಿದ್ದರೂ ಔಟ್ ನೀಡಿದಾಗ ಮರು ಮಾತನಾಡದೆ ಬ್ಯಾಟ್ಸ್ ಮನ್ ಹೊರಗೆ ಹೋಗಿದ್ದ ಎಂದು ಅವರು ಹೇಳುತ್ತಾರೆ. ಇದರೊಂದಿಗೆ ಕ್ರಿಕೆಟ್ ಇತಿಹಾಸದ ವಿಚಿತ್ರ ಔಟ್ ಎಂಬ ಖ್ಯಾತಿಗೂ ಪಾತ್ರವಾಗಿದೆ.
Comments are closed.