ಕರ್ನಾಟಕ

ಇಂದಿರಾ ಕ್ಯಾಂಟೀನ್‌ ಮಾದರಿ ಯೋಜನೆ ಜಾರಿಗೆ ಆಂಧ್ರ ಸಿದ್ಧತೆ

Pinterest LinkedIn Tumblr


ಬೆಂಗಳೂರು: ರಾಜ್ಯ ಸರಕಾರದ ಇಂದಿರಾ ಕ್ಯಾಂಟೀನ್‌ ಮಾದರಿಯ ಯೋಜನೆಯ ಜಾರಿಗೆ ಆಂಧ್ರ ಪ್ರದೇಶ
ಮುಂದಾಗಿದ್ದು, ಯೋಜನೆಯ ಕುರಿತ ಸಂಪೂರ್ಣ ಮಾಹಿತಿಯನ್ನು ಪಾಲಿಕೆಯ ಅಧಿಕಾರಿಗಳಿಂದ ಪಡೆದುಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಜಾರಿಗೊಳಿಸಲಾಗಿರುವ ಇಂದಿರಾ ಕ್ಯಾಂಟೀನ್‌ಗಳಿಗೆ ಜನರಿಗೆ ಉತ್ತಮ ಸ್ಪಂದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಅದೇ ಮಾದರಿಯ ಯೋಜನೆಯನ್ನು ತಾವು ಜಾರಿಗೊಳಿಸಲು ಆಂಧ್ರ ಪ್ರದೇಶದ ಸರಕಾರ ಉತ್ಸಾಹ ತೋರಿದೆ ಎನ್ನಲಾಗಿದೆ. ಆಂಧ್ರ ಸರಕಾರದ ಪೌರಾಡಳಿ ನಿರ್ದೇಶನಾಲಯದ ಕನ್ನಬಾಬು ನೇತೃತ್ವದಲ್ಲಿ ಅನಂತಪುರ,
ಕರ್ನೂಲು, ಚಿತ್ತೂರು ಜಿಲ್ಲೆಗಳ ಅಧಿಕಾರಿಗಳು ಇಂದಿರಾ ಕ್ಯಾಂಟೀನ್‌ಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

-ಉದಯವಾಣಿ

Comments are closed.