
ನವದೆಹಲಿ: ಭಾರತ ಮಹಿಳಾ ಹಾಕಿ ತಂಡ ಮಹಿಳಾ ಏಷ್ಯಾ ಕಪ್ ಹಾಕಿ ಪಂದ್ಯಾವಳಿಯಲ್ಲಿ ಚೀನಾ ತಂಡವನ್ನು 5-4 ಗೋಲುಗಳಿಂದ ಸೋಲಿಸಿ ಚಾಂಪಿಯನ್ ಆಗಿದೆ.
ನಾಲ್ಕನೇ ಬಾರಿ ಏಷ್ಯಾ ಕಪ್ ಫೈನಲ್ ಗೇರಿದ್ದ ಭಾರತದ ಮಹಿಳೆಯರು ಚೀನಾ ತಂಡದ ವಿರುದ್ಧ ಗೆಲ್ಲಲು ಪ್ರಬಲ ಪೈಪೋಟಿ ನಡೆಸಬೇಕಾಯಿತು. ಮೊದಲ ಭಾಗದಲ್ಲಿ ಎರಡೂ ತಂಡಗಳೂ ಗೋಲು ಗಳಿಸಿರಲಿಲ್ಲ.
ಪಂದ್ಯದ 25 ನೇ ನಿಮಿಷದಲ್ಲಿ ನವಜೋತ್ ಕೌರ್ ಮೊದಲ ಗೋಲು ಗಳಿಸಿ ಭಾರತಕ್ಕೆ ಮಹತ್ವದ ಮುನ್ನಡೆ ನೀಡಿದರು. ಪೆನಾಲ್ಟಿ ಶೂಟೌಟ್ ಮೂಲಕ ಗೆದ್ದ ಭಾರತ 13 ವರ್ಷದ ನಂತರ ಏಷ್ಯಾ ಕಪ್ ಚಾಂಪಿಯನ್ ಆಗಿ ಮೆರೆಯಿತು.
Comments are closed.