ಕ್ರೀಡೆ

ವಿರಾಟ್ ಬರ್ತ್ ಡೇ ದಿನದಂದೇ ಸೇಡು ತೀರಿಸಿದ ಪಾಂಡ್ಯ

Pinterest LinkedIn Tumblr


ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೋಹ್ಲಿ ಅವರ ಮೇಲೆ ಸಹ ಆಟಗಾರ ಹಾರ್ದಿಕ್ ಪಾಂಡ್ಯ ಸೇಡು ತೀರಿಸಿಕೊಂಡಿದ್ದಾರೆ.

ಹ್ಹಾಂ! ಅದೇನಂತೀರಾ? ಗಾಬರಿಯಾಗದಿರಿ. ವಿಷಯ ಏನೆಂದರೆ ಕಳೆದ ತಿಂಗಳಿನಲ್ಲಷ್ಟೇ ಪಾಂಡ್ಯ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು.

ಅಕ್ಟೋಬರ್ 11ರಂದು ಹಾರ್ದಿಕ್ ಅವರ 24ನೇ ಹುಟ್ಟುಹಬ್ಬವಾಗಿತ್ತು. ಅಂದು ಪಾಂಡ್ಯ ಅವರ ಮುಖ, ದೇಹಕ್ಕೆಲ್ಲ ಕೇಕನ್ನು ಹಚ್ಚುವ ಮೂಲಕ ಸಹ ಆಟಗಾರರು ಬರ್ತ್ ಡೇ ಸಂಭ್ರಮ ಆಚರಿಸಿಕೊಂಡಿದ್ದರು. ಅಂದಿನ ದಿನವೇ ಹೇಳಿಕೆಯನ್ನು ನೀಡಿದ್ದ ಹಾರ್ದಿಕ್, ಪ್ರತಿಯೊಬ್ಬರ ಬರ್ತ್ ಡೇ ವರ್ಷಕ್ಕೊಮ್ಮೆ ಬರಲಿದೆ. ತಾವು ಸೇಡು ತೀರಿಸಿಕೊಳ್ಳುವುದಾಗಿ ಘೋಷಣೆ ಮಾಡಿದ್ದರು.

ಆದಾದ ಬಳಿಕ ಟೀಮ್ ಇಂಡಿಯಾದಲ್ಲಿ ವಿರಾಟ್ ಕೋಹ್ಲಿ ಅವರ ಬರ್ತ್ ಡೇ ಮೊದಲು ಬಂದಿದೆ. ಇದೇ ತಕ್ಕ ಸಮಯ ಅಂದುಕೊಂಡಿರುವ ಪಾಂಡ್ಯ ನಾಯಕನ ದೇಹಕ್ಕೆಲ್ಲ ಕೇಕ್ ಮೆತ್ತಿ ಮುಯ್ಯಿ ತೀರಿಸಿಕೊಂಡಿದ್ದಾರೆ.

ಅಲ್ಲದೆ ತಮ್ಮ ಟ್ವಿಟರ್ ಪೋಸ್ಟ್‌ನಲ್ಲಿ ರಿವೆಂಜ್ ನಂ.1 ಎಂದು ಹೇಳುತ್ತಾ ನಾಯಕ ಕೋಹ್ಲಿಗೆ ವಿಷ್ ಮಾಡಿದ್ದಾರೆ.

Comments are closed.