ಮನೋರಂಜನೆ

ಬಿಗ್‌ ಮನೆಯಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ ಅನುಪಮಾ ಕಣ್ಣೀರು ! ಬರೀ ಸ್ನೇಹಿತರಷ್ಟೇನಾ ಅಥವಾ ಪ್ರೇಮ ಸಂಬಂಧವಿತ್ತಾ?

Pinterest LinkedIn Tumblr

ಬಿಗ್‌ಬಾಸ್‌ ಮನೆಯಲ್ಲಿ ಅನುಪಮಾ ಗೌಡ ಮತ್ತು ಜಗನ್‌ ಮಧ್ಯೆ ಏನು ನಡೀತಿದೆ ಎಂಬ ಗೊಂದಲ ಪ್ರೇಕ್ಷಕರನ್ನು ಕಾಡುತ್ತಿರುವುದು ಸುಳ್ಳಲ್ಲ. ಕಳೆದ ಎಪಿಸೋಡ್‌ನಲ್ಲಿ ತಮ್ಮಿಬ್ಬರ ನಡುವೆ ಆರು ವರ್ಷದಿಂದ ಸ್ನೇಹವಿದೆ ಎಂದು ಹೇಳಿಕೊಂಡಿದ್ದರು. ಆದರೆ ಅಷ್ಟು ವರ್ಷದಿಂದ ಪರಿಚಿತರಿದ್ದರೂ ಬಿಗ್‌ಬಾಸ್‌ ಮನೆಯಲ್ಲಿ ಇವರಿಬ್ಬರ ನಡುವೆ ಆತ್ಮೀಯತೆಯ ಕೊರತೆ ಎದ್ದು ಕಾಣುತ್ತಿದೆ.

ಇಂಥ ಸಂದರ್ಭದಲ್ಲಿ ಗುರುವಾರದ ಎಪಿಸೋಡ್‌ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅನುಪಮಾ ಕಣ್ಣೀರಿಡುತ್ತ ತಮ್ಮ ಹಳೆಯ ದಿನಗಳನ್ನು ತೇಜಸ್ವಿನಿ ಮುಂದೆ ಹೇಳುತ್ತಿದ್ದರು. ತೇಜಸ್ವಿನಿ ಮುಂದೆ ಅನುಪಮಾ ಆಡಿದ ಮಾತುಗಳೆಲ್ಲ ಪರೋಕ್ಷವಾಗಿ ಜಗನ್‌ಗೆ ಸಂಬಂಧಿಸಿದಂತೆ ಗೋಚರವಾಗುತ್ತಿತ್ತು.

ಮದುವೆ, ಟ್ಯಾಟೂ, ರಿಂಗ್‌ ಮತ್ತು ಎಂಗೇಜ್‌ಮೆಂಟ್‌ ಕುರಿತಾದ ವಿಚಾರಗಳನ್ನು ತೇಜಸ್ವಿನಿ ಮುಂದೆ ಹೇಳುತ್ತ ಕಣ್ಣೀರು ಹಾಕುತ್ತಿದ್ದರು ಅನುಪಮಾ. ಈ ಒಂದು ಘಟನೆ ಬಿಗ್‌ಬಾಸ್‌ ವೀಕ್ಷಕರಲ್ಲಿ ನಾನಾ ರೀತಿಯ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅಷ್ಟಕ್ಕೂ ಜಗನ್‌-ಅನುಪಮಾ ಮಧ್ಯೆ ಬಿಗ್‌ಬಾಸ್‌ ಮುಂಚಿತವಾಗಿ ಏನೆಲ್ಲ ನಡೆದಿದೆ? ಇವರಿಬ್ಬರು ಬರೀ ಸ್ನೇಹಿತರಷ್ಟೇನಾ ಅಥವಾ ಪ್ರೇಮ ಸಂಬಂಧವಿತ್ತಾ? ಎಂಬ ಪ್ರಶ್ನೆಗಳು ಗಿರಕಿ ಹೊಡೆಯುತ್ತಿವೆ.

Comments are closed.