ಕ್ರೀಡೆ

ಟೀಂ ಇಂಡಿಯಾದಲ್ಲಿದ್ದಾರಂತೆ ಮ್ಯಾಚ್ ಫಿಕ್ಸಿಂಗ್ ಆಟಗಾರ ! ಹೊಸದೊಂದು ಬಾಂಬ್ ಸಿಡಿಸಿದ ಶ್ರೀಶಾಂತ್

Pinterest LinkedIn Tumblr

ಕೊಚ್ಚಿ: ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಕಳಂಕದಿಂದಾಗಿ ಟೀಂ ಇಂಡಿಯಾಕ್ಕೆ ಮರಳಿ ಬರಲು ಸಾಧ್ಯವಾಗದೇ ಹತಾಶೆಯಲ್ಲಿರುವ ವೇಗಿ ಶ್ರೀಶಾಂತ್ ಹೊಸದೊಂದು ಬಾಂಬ್ ಸಿಡಿಸಿದ್ದಾರೆ.

ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದು ಶ್ರೀಶಾಂತ್ ನಿರ್ದೋಷಿ ಎಂದು ಸಾಬೀತಾದರೂ ಮರಳಿ ಕ್ರಿಕೆಟ್ ಆಡಲು ಬಿಸಿಸಿಐ ಒಪ್ಪಿಗೆ ಸಿಗುತ್ತಿಲ್ಲ. ಇದರಿಂದ ಕ್ರುದ್ಧರಾಗಿರುವ ಶ್ರೀಶಾಂತ್ ಟೀಂ ಇಂಡಿಯಾದಲ್ಲಿ ಸದ್ಯ ಆಡುತ್ತಿರುವ ಆಟಗಾರರೊಬ್ಬರೂ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಿದ್ದಾರೆ.

ಚೆನ್ನೈ ಮತ್ತು ರಾಜಸ್ಥಾನ ತಂಡವೂ ಮ್ಯಾಚ್ ಫಿಕ್ಸಿಂಗ್ ಕಳಂಕಕ್ಕೆ ತುತ್ತಾಗಿತ್ತು. ಹಾಗಿದ್ದರೂ ಆ ತಂಡದ ಆಟಗಾರರನ್ನೆಲ್ಲಾ ವಿಚಾರಣೆಗೊಳಪಡಿಸಲಿಲ್ಲವೇಕೆ? ವಿಚಾರಣೆ ಸಂದರ್ಭದಲ್ಲಿ ಪೊಲೀಸರು ಕೆಲವೊಂದು ಹೆಸರನ್ನು ಕೈ ಬಿಟ್ಟಿದ್ದೇಕೆ ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.

ಪೊಲೀಸರ ಪಟ್ಟಿಯಲ್ಲಿ ಮೊದಲಿದ್ದ ಕೆಲವು ಆಟಗಾರರ ಪೈಕಿ ಕೆಲವರು ಈಗಲೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಕ್ರಿಯರಾಗಿದ್ದಾರೆ. ಇವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಶ್ರೀಶಾಂತ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕಿಡಿ ಕಾರಿದ್ದಾರೆ. ಶ್ರೀಶಾಂತ್ ಈ ಹೇಳಿಕೆಗಳು ಹೊಸ ಸಂಚಲನ ಸೃಷ್ಟಿಸಿದೆ.

Comments are closed.