ಮನೋರಂಜನೆ

ರಜನಿ – ಅಕ್ಷಯ್ ಅಭಿನಯದ “2.0′ ಚಿತ್ರದ ಮೊದಲ ಪೋಸ್ಟರ್ ರಿಲೀಸ್

Pinterest LinkedIn Tumblr


ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ಅಭಿನಯದ ಬಹುನಿರೀಕ್ಷಿತ “2.0′ ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್‌ನಲ್ಲಿ ಅಕ್ಷಯ್ ತನ್ನ ಎದುರಾಳಿಯನ್ನು ಕೆಂಪು ಕಣ್ಣುಗಳಿಂದ ದಿಟ್ಟಿಸಿ ನೋಡುತ್ತಿರುವುದು ನೋಡುಗರಲ್ಲಿ ಭಯ ಹುಟ್ಟಿಸುತ್ತವೆ.

ಇನ್ನು ಚಿತ್ರದಲ್ಲಿ ರಜನಿ ಚಿಟ್ಟಿ ಹೆಸರಿನ ರೋಬೋ ಪಾತ್ರ ನಿರ್ವಹಿಸುತ್ತಿದ್ದಾರೆ. ಜೊತೆಗೆ ಆ್ಯಮಿ ಜಾಕ್‌ಸನ್ ಕೂಡಾ ರೋಬೊ ಲುಕ್‌ನಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ವಿಲನ್ ಆಗಿರುವ ಅಕ್ಷಯ್‌ ಅವರು ತಮ್ಮ ವೃತ್ತಿ ಜೀವನದಲ್ಲೇ ಇಂಥ ಪಾತ್ರವನ್ನು ಮಾಡಿರಲಿಲ್ಲ ಎಂದಿದ್ದಾರೆ.

ಅಲ್ಲದೇ ಎ.ಆರ್.ರೆಹಮಾನ್ ಸಂಗೀತ, ಶಂಕರ್ ನಿರ್ದೇಶನ ಚಿತ್ರಕ್ಕಿದೆ. ಇನ್ನು ಜನವರಿ 25ರಂದು ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ ಕಾರಣಾಂತರಗಳಿಂದ ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆಯಾಗಲಿದೆ.

 

-ಉದಯವಾಣಿ

Comments are closed.