ಮುಂಬೈ

ನವಜಾತ ಶಿಶುವನ್ನು ಶೌಚಾಲಯಕ್ಕೆ ಎಸೆದ ಅಪ್ರಾಪ್ತೆ

Pinterest LinkedIn Tumblr


ಮುಂಬಯಿ: ಅಪ್ರಾಪ್ತೆಯೊಂದಿಗೆ ದೈಹಿಕ ಸಂಪರ್ಕಹೊಂದಿ ಆಕೆಗೆ ಮಗು ಪ್ರಾಪ್ತಿಸಿದ 19ರ ಯುವಕನನ್ನು ವಸಾಯಿ ಪೊಲೀಸರು ಬಂಧಿಸಿದ್ದು, ನವಜಾತ ಶಿಶುವನ್ನು ಶೌಚಾಲಯದ ಹಿಂದೆ ಎಸೆದ ಕಾರಣಕ್ಕೆ ಬಾಲಕಿ ಮತ್ತು ಆಕೆಯ ತಾಯಿ ವಿರುದ್ಧ ಪೊಲೀಸರು ದೂರು ದಾಖಲಿಸಿದ ಘಟನೆ ನಡೆದಿದೆ

ಘಟನೆ ಬಾಲಕಿಯ ಮನೆಯಲ್ಲೇ ನಡೆದಿದ್ದು ಕಳೆದ ಹಲವರು ವರ್ಷಗಳಿಂದ ಸೋದರ ಸಂಬಂಧಿ ಅಪ್ರಾಪ್ತೆಯ ಕುಟುಂಬದೊಂದಿಗೆ ನೆಲೆಸಿದ್ದ. ಬಳಿಕ ಬಾಲಕಿಯೊಂದಿಗೆ ದೈಹಿಕ ಸಂಬಂಧ ಹೊಂದಿದ್ದ. ಬಾಲಕಿ ಗರ್ಭಿಣಿಯಾದ ವಿಚಾರ ಆಕೆಯ ತಾಯಿಗೂ ತಿಳಿದಿದ್ದು ಆದರೆ ಪೊಲೀಸರಿಗೆ ತಿಳಿಸದೇ ಹಾಗೆಯೇ ಬಿಟ್ಟಿದ್ದಾರೆ.

ಕಳೆದ ಗುರುವಾರದಂದು ಬಾಲಕಿಯು ಮಗುವಿಗೆ ಜನ್ಮವಿತ್ತಿದ್ದಾಳೆ ಎನ್ನಲಾಗಿದೆ. ಆದರೆ ಈ ವಿಚಾರ ಯಾರಿಗೂ ತಿಳಿಸದೆ ತಾಯಿ-ಮಗಳು ನವಜಾತ ಶಿಶುವನ್ನು ಶೌಚಾಲಯದ ಹಿಂದೆ ಎಸೆದಿದ್ದಾರೆ. ಇದನ್ನು ಗಮನಿಸಿದ ನೆರೆಹೊರೆಯವರು ವಸಾಯಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೂಡಲೇ ಬಾಲಕಿ ಮತ್ತು ಮಗುವನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ತಾಯಿಯನ್ನು ವಿಚಾರಿಸಿದಾಗ ಆಕೆ ತಪ್ಪು ಒಪ್ಪಿಕೊಂಡಿದ್ದು, ಮರ್ಯಾದೆಗೆ ಅಂಜಿ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿಲ್ಲ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಯುವಕನ್ನು ಈಗಾಗಲೇ ಪೊಲೀಸರು ಬಂಧಿಸಿದ್ದು, ಮಗುವನ್ನು ಎಸೆದ ಕಾರಣಕ್ಕೆ ಬಾಲಕಿ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದು ಆಸ್ಪತ್ರೆಯಿಂದ ಬಿಡಗಡೆಯಾದ ಕೂಡಲೇ ಬಂಧಿಸುವುದಾಗಿ ಪೊಲೀಸರು ಹೇಳಿದ್ದಾರೆ.

Comments are closed.