ಅಂತರಾಷ್ಟ್ರೀಯ

ಈ ಮುಸ್ಲಿಂ ದಂಪತಿಗೆ ಕೇಸರಿ ಬಟ್ಟೆ, ಹಣೆಗೆ ಕುಂಕುಮ ಇಡುವುದೆಂದರೆ ಇಷ್ಟ

Pinterest LinkedIn Tumblr


ಘಾಜಿಯಾಬಾದ್‌: ಈ ಮುಸ್ಲಿಂ ದಂಪತಿಗಳು ಎಲ್ಲರಿಗಿಂತಲೂ ವಿಭಿನ್ನ, ಕೇಸರಿ ಬಣ್ಣದ ಕುರ್ತಾ, ಹಣೆಗೆ ಕುಂಕುಮವಿಟ್ಟು ದಿನವಿಡೀ ಹಬ್ಬವನ್ನು ಆಚರಿಸುವ ಈ ದಂಪತಿಯನ್ನು ಕಂಡರೆ ಮೊರಾದ್‌ ನಗರದ ಈದ್ಗಾ ಕಾಲೋನಿ ಜನರಿಗೆ ಮಾತ್ರ ಹೊಟ್ಟೆ ಉರಿ. ಇವರ ಈ ನಡೆಯನ್ನ ಬೆಂಬಲಿಸಿ ಅಂತಿಮವಾಗಿ ಮೌಲ್ವಿಯೊಬ್ಬರು ಫತ್ವಾ ಕೂಡಾ ಹೊರಡಿಸಿದ್ದಾರೆ.

ಹೌದು, ಇದು ಆಸಿಫ್‌ ಅಲಿ ಮತ್ತು ಫಾತಿಮಾ ಬಿ ದಂಪತಿಗಳ ಕಥೆ. ಘಾಜಿಯಾಬಾದ್ ಮೂಲದ ಆಸಿಫ್‌ ಅಲಿ ಮೊರಾದ್‌ನಗರದಲ್ಲಿ ವಾಸಿಸುತ್ತಿದ್ದು, ಹಣ್ಣು ಮಾರಾಟದಿಂದ ಹಿಡಿದು ಕಾರ್ ಮೆಕ್ಯಾನಿಕ್‌, ಟ್ಯಾಕ್ಸಿ ಚಾಲನೆ ಸೇರಿದಂತೆ ಅಲಿ ವಿಭಿನ್ನ ವಹಿವಾಟುಗಳಲ್ಲಿ ದುಡಿದಿದ್ದಾರೆ.

‘ಈದ್‌, ನಮ್ಮ ಮಕ್ಕಳ ಹುಟ್ಟಿದ ಹಬ್ಬದ ಸಂದರ್ದದಲ್ಲಿ ಇಲ್ಲವೇ ಇನ್ನಾವುದೇ ವಿಶೇಷ ದಿನಗಳಲ್ಲಿ ಕೇಸರಿ ಬಟ್ಟೆ ಉಡುತ್ತೇನೆ . ಈ ಬಣ್ಣ ನನಗೆ ಸಂತೋಷ, ಚೈತನ್ಯ ತುಂಬುತ್ತದೆ. ಆದರೆ ನನ್ನ ಅಕ್ಕಪಕ್ಕದ ಮನೆಯವರು ಮಾತ್ರ ನಮ್ಮನ್ನು ಕಂಡರೆ ಉರಿದು ಬೀಳುತ್ತಾರೆ’ ಎಂದು ಆಸಿಫ್‌ ಅಲಿ ಅಳಲು ತೋಡಿಕೊಂಡಿದ್ದಾರೆ.
ನನ್ನ ಹೆಂಡತಿ ಬಿಂದಿಯಿಡುವುದನ್ನು ಕಂಡು ಹಲವಾರು ಮಂದಿ ಸಾರ್ವಜನಿಕವಾಗಿಯೇ ಅವಹೇಳನ ಮಾಡಿದ್ದಾರೆ. ಆದರೆ ಪೂರ್ವ ಬಿಹಾರ ಭಾಗದ ಜನರ ಮೇಲೆ ಬೆಂಗಾಲಿ ಸಂಸ್ಕೃತಿ ಪ್ರಭಾವ ಹೇರಳವಾಗಿರುವುದರಿಂದ ಮುಸ್ಲಿಮರೆಲ್ಲರೂ ಹಣಗೆ ಬಿಂದಿಯಿಡುತ್ತಾರೆ ಎಂದು ಅಲಿ ಹೇಳಿದ್ದಾರೆ.

ಇನ್ನು ಸ್ಥಳೀಯ ಜನರು ಇವರ ನಡೆಯನ್ನು ಕಂಡು ದಾಳಿ ಮಾಡಲು ಮುಂದಾದ ಸಂದರ್ಭದಲ್ಲಿ ಅಲಿ ಸ್ಥಳೀಯ ಮೌಲ್ವಿಯನ್ನು ಭೇಟಿಯಾಗಿದ್ದರು.

ಬಳಿಕ ಅವರು ಹಿರಿಯ ಮೌಲ್ವಿಗಳ ಮೂಲಕ ಮುಸ್ಲಿಮರು ಕೇಸರಿ ಬಣ್ಣದ ಬಟ್ಟೆ ಉಡುವುದು, ಮಹಿಳೆಯರು ಹಣೆಗೆ ಕುಂಕುಮ ಇಡುವುದು ಇಸ್ಲಾಮಿಕ್‌ ಧರ್ಮಕ್ಕೆ ವಿರುದ್ಧವಲ್ಲ ಎಂದು ಫತ್ವಾ ಹೊರಡಿಸಿದ್ದಾರೆ.

Comments are closed.