ಗಲ್ಫ್

ನಾಳೆ ದುಬೈಯಲ್ಲಿ ಮೊಳಗಲಿದೆ ಕನ್ನಡ ಕೋಗಿಲೆಗಳ- ‘ಸಂಗೀತ ಸಂಗಮ’ -2017

Pinterest LinkedIn Tumblr

ದೀಪಾವಳಿ ಹಬ್ಬದ ಅಂಗವಾಗಿ ಶ್ರೀಲಲಿತಾ ಈವೆಂಟ್ಸ್ ಹಾಗೂ ವೆಂಚುರಾ ರಿಸೋರ್ಸಸ್ ಪ್ರಸ್ತುತ ಪಡಿಸುವ ಕನ್ನಡ ಕೋಗಿಲೆಗಳ “ಸಂಗೀತ ಸಂಗಮ” ಕಾರ್ಯಕ್ರಮವನ್ನು ಅಕ್ಟೊಬರ್ 20 ರಂದು ಸಂಜೆ 5 ಘಂಟೆಗೆ ದುಬೈಯ ಶೇಖ್ ರಾಶಿದ್ ಸಭಾಂಗಣ, ಇಂಡಿಯನ್ ಹೈಸ್ಕೂಲ್ನಲ್ಲಿ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಕನ್ನಡದ ಹೆಸರಾಂತ ಚಲನಚಿತ್ರ ಗಾಯಕ ‘ಮಾಧುರ್ಯ ಸ್ವರ ಸಾರ್ವಭೌಮ’ ರಾಜೇಶ್ ಕೃಷ್ಣನ್ ಮುಂಚೂಣಿಯಲ್ಲಿದ್ದು, ಜೊತೆಗೆ ‘ಕನ್ನಡದ ಗಾರುಡಿಗ’- ಹೇಮಂತ್, ‘ಮಲೆನಾಡ ಕೋಗಿಲೆಗಳು’ ಎಂದೇ ಪ್ರಸಿದ್ಧರಾದ -ಮಾನಸ ಹೊಳ್ಳ ಮತ್ತು ಪ್ರಾರ್ಥನಾ ಹಾಗೂ ಸರಿಗಮಪ little champs (season 10 ) ವಿಜೇತೆ -ಸುಪ್ರಿಯಾ ಇವರೆಲ್ಲರೂ ತಮ್ಮನ್ನು ತಮ್ಮ ಸುಶ್ರಾವ್ಯವಾದ ಸಂಗೀತದ ಮೂಲಕ ತಮ್ಮೆಲ್ಲರಿಗೂ ರಸದೌತಣವನ್ನು ನೀಡಿ ರಂಜಿಸಲಿದ್ದಾರೆ.

ದುಬೈ ನ ಖ್ಯಾತ ಉದ್ಯಮಿ ಹಾಗು ‘ಮಾರ್ಚ್ 22 ‘ ಸಿನೆಮಾ ನಿರ್ಮಾಪಕರಾಗಿರುವ ಗಲ್ಫ್’ನ ಚಿರಪರಿಚಿತ ಗಾಯಕ ಹರೀಶ್ ಶೆರಿಗಾರ್ ಕೂಡ ತಮ್ಮ ಸುಮಧುರ ಕಂಠದಿಂದ ಗಾನ ಸುಧೆ ಹರಿಸಲಿದ್ದಾರೆ.

ಸಕಲ ಕಲೆಗಳನ್ನು ಮೈಗೂಡಿಸಿಕೊಂಡಿರುವ ಶ್ರೀಯುತ ರವಿಸಂತು ತಮ್ಮ ವಿಶೇಷ ಅಣುಕು ಪ್ರದರ್ಶನದೊಂದಿಗೆ ಕಾರ್ಯಕ್ರಮ ನಿರ್ವಹಿಸಲಿದ್ದಾರೆ ಇವರೊಂದಿಗೆ 17 ವರ್ಷಗಳ ಹಿಂದೆ ಯುಏಇಯಲ್ಲಿ ಕಾರ್ಯನಿರ್ವಹಿಸಿ ತಾಯ್ನಾಡಿಗೆ ತೆರಳಿದ್ದ ಶ್ರೀಯುತ ನಾಗೇಶ್ ವಿಜಾಪುರ ಮತ್ತೆ ದುಬೈಗೆ ಕಾರ್ಯಕ್ರಮ ನಿರ್ವಹಣೆಯ ಮೂಲಕ ವೇದಿಕೆ ಏರಲಿದ್ದಾರೆ.

ಪ್ರಸಿದ್ಧ ಟಿವಿ ಧಾರವಾಹಿ ”Comedy ಕಿಲಾಡಿಗಳು’ ಎಂಬ ಕಾರ್ಯಕ್ರಮದಲ್ಲಿ ಭಾಗವಾಹಿಸಿ 2ನೇ ಸ್ಥಾನವನ್ನು ಮುಡಿಗೇರಿಸಿಕೊಂಡ ‘ಮಾತಿನ ಮಲ್ಲಿ’ ಕುಮಾರಿ ನಯನ ಅವರೊಂದಿಗೆ, GG ಎಂದೇ ಪ್ರಸಿದ್ಧರಾದ ಗೋವಿಂದೇಗೌಡ ಹಾಗು ಸ್ತ್ರೀ ಪಾತ್ರದಲ್ಲಿ ಜನಮನ ರಂಜಿಸಿದ ಆನೇಪಟಾಕಿ ಅನೀಷ ನಾಡಿನ ಟಿವಿ ದಾರವಾಹಿಯಲ್ಲಿ ಜನರ ಮನಸ್ಸನ್ನು ಸೂರೆಗೊಂಡ ಈ ಮೂವರು ದುಬೈ ಕನ್ನಡಿಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ತಮ್ಮ ಮುಂದೆ ಬರುತ್ತಿದ್ದಾರೆ.

ಸಂಗೀತಕ್ಕೆ ಮೆರುಗು ನೀಡಲು ಕನ್ನಡದ ಪ್ರಸಿದ್ದ ಟಿವಿ ಧಾರಾವಾಹಿಗಳ ಎಲ್ಲಾ ಕಾರ್ಯಕ್ರಮಗಳಲ್ಲೂ ಸಂಗೀತ ನೀಡುತ್ತಿರುವ ಅತ್ಯದ್ಬುತ ಕಲಾವಿದರಾದ – ಸಂದೀಪ ಕೊಳಲು ಹಾಗು ಸ್ಯಾಕ್ಸೋಫೋನ್, ಅಭಿಷೇಕ್ Rythm Pad, , ಪ್ರಾರ್ಥನ Baas Guitar, ಪ್ರದ್ಯುಮ್ನ ತಬಲ, ಕಾರ್ತಿಕ್ Lead Guitar ಹಾಗು ದೀಪಕ್ Key Board ನುಡಿಸುತ್ತಾ ಸಂಗೀತದ ರಸಧಾರೆಯನ್ನು ಸುರಿಸಲಿದ್ದಾರೆ.

ಭರತನಾಟ್ಯ ಪ್ರವೀಣೆಯರಾದ ನಾಟ್ಯಮಯೂರಿ ಶಾಲಿನಿ ಹಾಗು ನಾಟ್ಯಮಯೂರಿ ಮಾಲಿನಿ ಸಹೋದರಿಯರು ತಮ್ಮ ಅದ್ಬುತ ನೃತ್ಯ ಪ್ರದರ್ಶನದೊಂದಿಗೆ ನಿಮ್ಮ ಮನಸ್ಸನ್ನು ಸೆರೆ ಹಿಡಿಯಲಿದ್ದಾರೆ.

ನಮ್ಮವರೇ ಆದ ದುಬೈನ RIVA ಡಾನ್ಸ್ & ಮ್ಯೂಸಿಕ್ ಇನ್ಸ್ಟಿಟ್ಯೂಟನ ಮಕ್ಕಳು ತಮ್ಮ ನವೀನ ನೃತ್ಯದ ಮೂಲಕ ತಮ್ಮೆಲ್ಲಾ ಹೊಸಲೋಕಕ್ಕೆ ಕರೆದೊಯ್ಯಲಿದ್ದಾರೆ. ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ನಾಡಿನ ಗಾಯಕರು ಹಾಗು ನೃತ್ಯ ಪ್ರವೀಣರು ವಿಶೇಷವಾಗಿ ನಮ್ಮೊಂದಿಗೆ ಇದ್ದು ನಿಮ್ಮನ್ನೆಲ್ಲಾ ರಂಜಿಸುತ್ತಾ ಆಚರಿಸಲಿದ್ದಾರೆ.

ಕನ್ನಡ ಕೋಗಿಲೆಗಳ- ‘ಸಂಗೀತ ಸಂಗಮ’ -2017 ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀ.ಪ್ರಸಾದ್ ಶೆಟ್ಟಿ ಮತ್ತು ಶ್ರೀ.ರುದ್ರಯ್ಯ ನವಲಿ ಹಿರೇಮಠ ಅವರು ವಹಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದ ಟಿಕೆಟ್ ಆನ್ ಲೈನಿನಲ್ಲಿ ಖರೀದಿಸಬಹುದಾಗಿದ್ದು, ಈ ಕೆಳಗೆ ಟಿಕೆಟ್ ಖರೀದಿಗಾಗಿ ಲಿಂಕನ್ನು ನೀಡಲಾಗಿದೆ.
https://dubai.platinumlist.net/event-tickets/62884/kannada-kogilegala?show=94623

ವರದಿಗಾರರು: ಶ್ರೀಮತಿ. ಹೇಮ ಮಂಜುನಾಥ್

Comments are closed.